ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ತಾರಾ ಅವರು, ನಟ ಅರ್ಜುನ್ ಸರ್ಜಾ ಏನು ಎಂದು ನನಗೆ ಚೆನ್ನಾಗಿ ತಿಳಿದಿದೆ. ಸುಮಾರು ವರ್ಷಗಳಿಂದ ನಾನು ಅವರನ್ನು ಚೆನ್ನಾಗಿ ಬಲ್ಲೆ. ಅವರೊಂದಿಗೆ ಜತೆ ಪ್ರೇಮಾಗ್ನಿ ಸಿನಿಮಾದಲ್ಲಿ ನಟಿಸಿದ್ದೇನೆ. ಅವರು ತುಂಬ ಒಳ್ಳೆಯ, ಸಭ್ಯ ಮನುಷ್ಯ. ಅವರ ವಿರುದ್ಧ ಕೇಳಿಬರುತ್ತಿರುವ ಆರೋಪಗಳು ನಿಜಕ್ಕೂ ಒಪ್ಪಲು ಅಸಾಧ್ಯ ಎಂದು ಹೇಳಿದ್ದಾರೆ.