#MeToo: ಅರ್ಜುನ್ ನನಗೆ ಒಳ್ಳೆಯ ಗೆಳೆಯ, ಶ್ರುತಿ ಹರಿಹರನ್ ಅವಕಾಶವಾದಿ ಹೆಣ್ಣಲ್ಲ- ಪ್ರಕಾಶ್ ರೈ
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ ಮೀ ಟೂ ಆರೋಪಕ್ಕೆ ಬೆಂಬಲ ಸೂಚಿಸಿದ್ದ ನಟ ಪ್ರಕಾಶ್ ರಾಜ್ ಇದೀಗ ಶೃತಿ ಪರ ನಿಂತಿರುವುದನ್ನು ಸಮರ್ಥಿಸಿಕೊಂಡಿದ್ದಾರೆ...
ಬೆಂಗಳೂರು: ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿದ್ದ ಮೀ ಟೂ ಆರೋಪಕ್ಕೆ ಬೆಂಬಲ ಸೂಚಿಸಿದ್ದ ನಟ ಪ್ರಕಾಶ್ ರಾಜ್ ಇದೀಗ ಶ್ರುತಿ ಪರ ನಿಂತಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಅರ್ಜುನ್ ಸರ್ಜಾ ನನ್ನ ಬಹುಕಾಲದ ಗೆಳೆಯ...ಸಹ ಪ್ರಯಾಣಿಕ... ಆತನನ್ನು ನಾನು ತುಂಬಾ ಚೆನ್ನಾಗಿ, ನಿಮ್ಮೆಲ್ಲರಿಗಿಂತ ಆಂತರಿಕವಾಗಿ ಬಲ್ಲೆ... ನಾನು ಎಲ್ಲೂ ಆತನನ್ನು ಸಾರಾಸಗಟಾಗಿ ಅಪರಾಧಿ ಎನ್ನಲಿಲ್ಲ... ಯಾರ ಬಗ್ಗೆಯು ಅರ್ಥವಿಲ್ಲದ ದೂಷಣೆ ಮಾಡುವವನೂ ನಾನಲ್ಲ.
ಶ್ರುತಿ.. ಎಲ್ಲರೂ ದೂಷಿಸುತ್ತಿರುವಂತೆ ಅವಕಾಶವಾದಿ ಹೆಣ್ಣು ಮಗಳಲ್ಲ.. ಅಪ್ಪಟ ಪ್ರತಿಭಾವಂತೆ.. ದಿಟ್ಟ ಹೆಣ್ಣು.. ನಮ್ಮೆಲ್ಲರಂತೆ ಇವರನ್ನೂ ಬೆಳೆಸಿರುವುದು ನಮ್ಮ ಸಮಾಜವೇ... ಈ ಇಬ್ಬರೂ ಚಿತ್ರರಂಗದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಕೆಲಸ ಮಾಡಬೇಕಾದವರೂ.. ಮಾಡಲು ಸಾಧ್ಯವಿರುವವರು..
ಈ ಸತ್ಯದ ಹಿನ್ನೆಲೆಯಲ್ಲಿ ನಾನು ತುಂಬಾ ಮಾರ್ಮಿಕವಾಗಿ ಕೇಳುತ್ತಿರುವ ಸೂಕ್ಷ್ಮತೆಯ ಪ್ರತಿಕ್ರಿಯೆ ಎಲ್ಲರಿಗೂ ಅರ್ಥವಾದರೆ ಒಳಿತು...ಪಕ್ಷಪಾತವಿಲ್ಲದೆ..ಪೂರ್ವಾಗ್ರಹ ಪೀಡಿತರಲ್ಲದ ಕೆಲವು ಹಿರಿಯರು ಇಬ್ಬರನ್ನು ಕರೆಸಿ ಕೂರಿಸಿ ತಕ್ಷಣವೆ ಇತ್ಯರ್ಥಿಸಿ ಎಂದು ಬರೆದುಕೊಂಡಿದ್ದಾರೆ.