ಸಂಗ್ರಹ ಚಿತ್ರ
ಸಿನಿಮಾ ಸುದ್ದಿ
'ಪ್ರಿಯಾಂಕ ಹೊರಬಂದಿದ್ದಾರೆ, ಚೇತನ್ ರ ಫೈರ್ ಎಂಬ ಸಂಸ್ಥೆ ಬಗ್ಗೆ ಅನುಮಾನವಿದೆ': ಅಂಬರೀಶ್
ಸ್ಯಾಂಡಲ್ ವುಡ್ ಮೀಟೂ ಪ್ರಕರಣದ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿರುವ ನಟ ಚೇತನ್ ಅವರ ಫೈರ್ ಸಂಸ್ಥೆ ವಿರುದ್ಧ ಹಿರಿಯ ನಟ ಅಂಬರೀಶ್ ಅವರೂ ಕೂಡ ಪರೋಕ್ಷ ಅನುಮಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಸ್ಯಾಂಡಲ್ ವುಡ್ ಮೀಟೂ ಪ್ರಕರಣದ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿರುವ ನಟ ಚೇತನ್ ಅವರ ಫೈರ್ ಸಂಸ್ಥೆ ವಿರುದ್ಧ ಹಿರಿಯ ನಟ ಅಂಬರೀಶ್ ಅವರೂ ಕೂಡ ಪರೋಕ್ಷ ಅನುಮಾನ ವ್ಯಕ್ತಪಡಿಸಿದ್ದಾರೆ.
ನಟ ಅರ್ಜುನ್ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ಇಂದು ನಡೆದ ಸಂಧಾನ ಸಭೆಯ ನೇತೃತ್ವ ವಹಿಸಿದ್ದ ಅಂಬರೀಶ್, ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಈ ವೇಳೆ ಪ್ರಕರಣ ಕೋರ್ಟ್ ನಲ್ಲಿರುವುದರಿಂದ ನಾವು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಅಂತೆಯೇ ಇಡೀ ಪ್ರಕರಣದಲ್ಲಿ ಬಲವಾಗಿ ಕೇಳಿಬರುತ್ತಿರುವ ನಟ ಚೇತನ್ ಅವರ ಫೈರ್ ಸಂಸ್ಥೆ ಕುರಿತು ಮಾತನಾಡಿದ ಅಂಬರೀಶ್ ಅವರು, 'ಚೇತನ್ ರ ಫೈರ್ ಎಂಬ ಸಂಸ್ಥೆ ಬಗ್ಗೆ ಅನುಮಾನವಿದೆ. ಇಂದು ಪ್ರಿಯಾಂಕಾ ಉಪೇಂದ್ರ ಫೈರ್ ಸಂಸ್ಥೆಯಿಂದ ಹೊರಬಂದಿರೋದು ನೋಡಿದ್ರೆ, ಆ ಸಂಘಟನೆಯೇ ಸುಳ್ಳು ಎಂಬುವುದು ಸಾಬೀತಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ಇದು ಕೂಡಲೇ ಬಗೆಹರಿಯುವಂತಹ ಪ್ರಕರಣ ಅಲ್ಲ. ಇಬ್ಬರ ಮನಸ್ಸಿಗೂ ನೋವಾಗಿದೆ. ಸಂಧಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ಸಮಯವಕಾಶ ನೀಡಬೇಕಿದೆ. ಪ್ರಕರಣದ ಒಂದು ಹೆಜ್ಜೆ ಈಗಾಗಲೇ ನ್ಯಾಯಾಲಯದಲ್ಲಿದೆ. ಹಾಗಾಗಿ ತುಂಬಾ ಎಚ್ಚರಿಕೆಯಿಂದ ಎಲ್ಲವನ್ನು ನೋಡಬೇಕಿದೆ. ನಾನು ಹೇಳಿದ್ದು ಒಂದೇ ಮಾತು. ಶೇಖ್ ಹ್ಯಾಂಡ್ ಮಾಡಿ, ಒಬ್ಬರಿಗೊಬ್ಬರು ಮಾತನಾಡಿಸಬೇಡಿ. ಬೇರೆ ಬೇರೆಯಾಗಿ ಹೋಗಿ, ನಿಮ್ಮಿಬ್ಬರ ಮಧ್ಯೆ ನಾನು ಮಾತನಾಡುತ್ತೇನೆ ಎಂದು ಹೇಳಿದ್ದೇನೆ ಎಂದು ಅಂಬರೀಶ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ