ರಣಂ ಚಿತ್ರದ ಮೂಲಕ ಕನ್ನಡ ಚತ್ರರಂಗಕ್ಕೆ ಅರ್ಬಾಜ್ ಖಾನ್ ಎಂಟ್ರಿ!

ವಿ. ಸಮುದ್ರ ನಿರ್ದೇಶನದ ಮಲ್ಟಿ ಸ್ಟಾರರ್ ಸಿನಿಮಾ ರಣಂ,ಚಿತ್ರೀಕರಣ ಹಂತದಲ್ಲಿದೆ, ಕೆ,ಆರ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಬಾಲಿವುಡ್ ನಟ ..
ಅರ್ಬಾಜ್ ಖಾನ್
ಅರ್ಬಾಜ್ ಖಾನ್
ಬೆಂಗಳೂರು: ವಿ. ಸಮುದ್ರ ನಿರ್ದೇಶನದ ಮಲ್ಟಿ ಸ್ಟಾರರ್ ಸಿನಿಮಾ ರಣಂ,ಚಿತ್ರೀಕರಣ ಹಂತದಲ್ಲಿದೆ, ಕೆ,ಆರ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಬಾಲಿವುಡ್ ನಟ ಅರ್ಬಾಜ್ ಖಾನ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸಿನಿಮಾದಲ್ಲಿ ಚೇತನ್ ಮತ್ತು ಚಿರಂಜೀವಿ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ,
ಮತ್ತೊಂದು ಸುತ್ತಿನ ಮಾತುಕತೆ ನಂತರ ಅರ್ಬಾಜ್ ಖಾನ್ ಗ್ರೀನ್ ಸಿಗ್ನಿಲ್ ನೀಡಲಿದ್ದಾರೆ ಎಂದು ಹೇಳಲಾಗಿದೆ, ಇನ್ನೂ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ನಿರ್ಮಾಪಕ ಆರ್ ಎಸ್ ಶ್ರೀನಿವಾಸ್ ಹೇಳಿದ್ದಾರೆ, ನಿರ್ಧಿಷ್ಟ ಪಾತ್ರವೊಂದಕ್ಕೆ  ನಾವು ಅರ್ಬಾಜ್ ಖಾನ್ ಅವರ ಜೊತೆ ಮಾತುಕತೆ ನಡೆಸಿದ್ದೇವೆ, ನಮ್ಮ ಷರತ್ತುಗಳಿಗೆ ಒಪ್ಪಿದರೇ  ಅರ್ಬಾಜ್ ಖಾನ್ ರಣಂ ನಲ್ಲಿ ನಟಿಸಲಿದ್ದಾರೆ ಎಂದು ತಿಳಿಸಿದ್ದಾರೆ,
ರಣಂ ಸಿನಿಮಾದಲ್ಲಿ ಚೇತನ್ ಕ್ರಾಂತಿಕಾರಿ ನಾಯಕನಾಗಿ ನಟಿಸಿದ್ದಾರೆ, ಚಿರಂಜೀವಿ ಸರ್ಜಾ ಪೊಲ್ಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ, ನೀತು ಗೌಡ, ಮುಂತಾದವರು ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com