2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಶುದ್ಧಿ ಅತ್ಯುತ್ತಮ ಚಿತ್ರ

2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದ್ದು, 'ಶುದ್ಧಿ' ಸಿನಿಮಾ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದ್ದರೆ, 'ಮಾರ್ಚ್-22' ಸಿನಿಮಾ 2ನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದ್ದು, 'ಶುದ್ಧಿ' ಸಿನಿಮಾ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದ್ದರೆ, 'ಮಾರ್ಚ್-22' ಸಿನಿಮಾ 2ನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿ ಪಡ್ಡಾಯಿ ಮೂರನೇ ಅತ್ಯುತ್ತಮ ಚಿತ್ರವಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪವರ್ ಸ್ಟಾರ್ ಪುನೀತ್‌ ರಾಜಕುಮಾರ್‌ ಅಭಿನಯದ ರಾಜಕುಮಾರ ಅತ್ಯುತ್ತಮ ಮನರಂಜನೆಯ ಚಿತ್ರವಾಗಿ ಆಯ್ಕೆಯಾಗಿದೆ. 'ಎಳೆಯರು ನಾವು ಗೆಳೆಯರು' ಚಿತ್ರ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಪಡೆದಿದ್ದು, ಹಿರಿಯ ನಟಿ ತಾರಾ ಮನೋಜ್ಞವಾಗಿ ಅಭಿನಯಿಸಿರುವ ಹೆಬ್ಬೆಟ್‌ ರಾಮಕ್ಕ ಸಾಮಾಜಿಕ ಕಳಕಳಿಯ ಚಿತ್ರವಾಗಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಇನ್ನು ಮಂಜರಿ ಚಿತ್ರದಲ್ಲಿ ಉತ್ತಮ ಅಭಿನಯ ನೀಡಿದ ವಿಶ್ವತ್‌ ನಾಯ್ಕ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಿಶೇಷ ಸಾಮಾಜಿಕ ಕಾಳಜಿಯ ಚಿತ್ರವಾಗಿ ಹೆಬ್ಬೆಟ್ ರಾಮಕ್ಕ ಚಿತ್ರಕ್ಕೆ ಪ್ರಶಸ್ತಿ ಲಭ್ಯವಾಗಿದ್ದು, ತಾರಾ ಅನುರಾಧಾಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಚಿತ್ರಮಂಜರಿ ಸಿನಿಮಾದ ವಿಶೃತ್ ನಾಯ್ಕಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.
ಉಳಿದಂತೆ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾದ ಚಿತ್ರಗಳ ಪಟ್ಟಿ ಇಂತಿದೆ.
* ನಿರ್ದೇಶಕರ ಪ್ರಥಮ ನಿರ್ದೇಶನದ ಚಿತ್ರ – ಅಯನ
* ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ – ತುಳು ಭಾಷೆಯ ಸೋಫಿಯಾ
* ತೀರ್ಪುಗಾರರ ವಿಶೇಷ ಪ್ರಶಸ್ತಿ – ಮಹಾಕಾವ್ಯ ಚಿತ್ರದ ನಟ ಶ್ರೀದರ್ಶನ್‌, ರಾಗಾ ಸಿನಿಮಾದ ನಟ ಮಿತ್ರ
* ಅತ್ಯುತ್ತಮ ಪೋಷಕ ನಟ- ಮಂಜುನಾಥ ಹೆಗಡೆ (ಲಕ್ಷ್ಮೀನಾರಾಯಣದ ಪ್ರಪಂಚಾನೇ ಬೇರೆ)
* ಅತ್ಯುತ್ತಮ ಪೋಷಕ ನಟಿ- ರೇಖಾ (ಮೂಕ ನಾಯಕ)
* ಅತ್ಯುತ್ತಮ ಕತೆ – ಹನುಮಂತ ಬಿ. ಹಾಲಿಗೇರಿ (ಕೆಂಗುಲಾಬಿ)
* ಅತ್ಯುತ್ಯಮ ಚಿತ್ರಕಥೆ- ವೆಂಕಟ್ ಭಾರಧ್ವಾಜ್ (ಕೆಂಪಿರ್ವೆ)
* ಅತ್ಯುತ್ಯಮ ಸಂಭಾಷಣೆ-ಎಸ್.ಜಿ.ಸಿದ್ದರಾಮಯ್ಯ (ಹೆಬ್ಬೆಟ್ ರಾಮಕ್ಕ)
* ಅತ್ಯುತ್ತಮ ಛಾಯಾಗ್ರಹಣ-ಸಂತೋಶ್ ರೈ ಪತಾಜೆ (ಚಮಕ್)
* ಅತ್ಯುತ್ತಮ ಸಂಗೀತ ನಿರ್ದೇಶನ-ವಿ.ಹರಿಕೃಷ್ಣ (ರಾಜಕುಮಾರ)
* ಅತ್ಯುತ್ತಮ ಸಂಕಲನ- ಹರೀಶ್ ಕೊಮ್ಮ (ಮಫ್ತಿ)
* ಅತ್ಯುತ್ತಮ ಬಾಲನಟ- ಮಾಸ್ಟರ್ ಕಾರ್ತಿಕ್ (ರಾಮರಾಜ್ಯ)
* ಅತ್ಯುತ್ತಮ ಬಾಲನಟಿ- ಶ್ಲಘ ಸಾಲಿಗ್ರಾಮ (ಕಟಕ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com