ಟ್ರೋಲ್ ಮಾಡಿದವನಿಗೆ ನಟಿ ಕಾಜೋಲ್ ವಾಟ್ಸಾಪ್ ನಂಬರ್ ಟ್ವೀಟ್ ಮಾಡಿದ ಅಜಯ್ ದೇವಗನ್

ಬಾಲಿವುಡ್ ನಟ-ನಟಿಯರ ಜೊತೆಗೆ ಫೋಟೋ ತೆಗೆಸಿಕೊಳ್ಳುವುದಕ್ಕೆ ಅದೆಷ್ಟೋ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇನ್ನು ಅವರ ಫೋನ್ ನಂಬರ್ ಸಿಕ್ಕರೆ ಯಾರಿಗೆ ತಾನೇ ಬೇಡ ಹೇಳಿ..
ನಟಿ ಕಾಜೋಲ್ ಹಾಗೂ ಪತಿ ಅಜಯ್ ದೇವಗನ್
ನಟಿ ಕಾಜೋಲ್ ಹಾಗೂ ಪತಿ ಅಜಯ್ ದೇವಗನ್
Updated on: 
ಮುಂಬೈ: ಬಾಲಿವುಡ್ ನಟ-ನಟಿಯರ ಜೊತೆಗೆ ಫೋಟೋ ತೆಗೆಸಿಕೊಳ್ಳುವುದಕ್ಕೆ ಅದೆಷ್ಟೋ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇನ್ನು ಅವರ ಫೋನ್ ನಂಬರ್ ಸಿಕ್ಕರೆ ಯಾರಿಗೆ ತಾನೇ ಬೇಡ ಹೇಳಿ..
ನಟ ಅಜಯ್ ದೇವಗನ್ ಅವರು ತಮ್ಮ ಪತ್ನಿ ಕಾಜೋಲ್ ಅವರ ಫೋನ್ ನಂಬರ್ ಅನ್ನು ಆಕಸ್ಮಿಕವಾಗಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಇದು ಎಲ್ಲರಿಗೂ ಅಚ್ಚರಿಯುಂಟು ಮಾಡಿದೆ. 
ಕಾಜೋಲ್ ಈಗ ದೇಶದಲ್ಲಿ ಇಲ್ಲ. ಅವರ ವಾಟ್ಸಾಪ್ ನಂಬರ್ ನೀಡುತ್ತೇನೆ ಸಹಕರಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಇದೇನು ಪತ್ನಿ ನಂಬರ್ ಹಂಚಿಕೊಂಡಿದ್ದಾರೆ. ಖಾತೆ ಹ್ಯಾಕ್ ಆಗಿರಬೇಕೆಂದು ತಿಳಿಯಬೇಡಿ. ಅಜಯ್ ಅವರ ಟ್ವಿಟರ್ ಖಾತೆ ಹ್ಯಾಕ್ ಆಗಿಲ್ಲ. 
ಕಾಜೋಲ್ ಅವರ ನಂಬರ್ ಸಿಗುತ್ತಿದ್ದಂತೆಯೇ ಅಭಿಮಾನಿಗಳು ಸಂದೇಶಗಳನ್ನು ರವಾನಿಸುತ್ತಿದ್ದು, ಮೇಡಂ ನಿಮ್ಮ ವಾಟ್ಸಾಪ್ ನಂಬರ್'ನ್ನು ಅಜಯ್ ದೇವಗನ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಕೂಡಲೇ ವಾಟ್ಸಾಪ್ ಖಾತೆ ಡಿಲಿಟ್ ಮಾಡಿ, ಮೊಬೈಲ್ ಸ್ವಿಚ್ ಆಫ್ ಮಾಡಿ. ಇಲ್ಲದೇ ಹೋದರೆ ನನ್ನಂತೆಯೇ ಹಲವು ಜನರು ನಿಮಗೆ ತೊಂದರೆ ಕೊಡುತ್ತಾರೆಂದು ಹೇಳಿರುವುದಾಗಿ ತಿಳಿದುಬಂದಿದೆ. 
ಇದಲ್ಲದೆ ಕೆಲ ಅಭಿಮಾನಿಗಳು ದಿಲ್ವಾಲೆ ಚಿತ್ರಕ್ಕೆ ರೂ.250 ವ್ಯಯಿಸಿದ್ದೇನೆ. ನನ್ನ ಹಣವನ್ನು ಹಿಂತಿರುಗಿಸಿ ಎಂದು ಕೇಳಿದ್ದಾರೆ. 
ಇನ್ನು ಕಾಜೋಲ್ ನಂಬರ್ ಹಂಚಿಕೊಂಡಿದ್ದಕ್ಕೆ ಕಾರಣ ನೀಡಿರುವ ಅಜಯ್ ಅವರು, ಸಿನಿಮಾ ಸೆಟ್ ನಲ್ಲಿ ತಮಾಷೆಗಳು ಬಹಳ ಆಯಿತು... ಆದ್ದರಿಂದ ನಿಮ್ಮನ್ನು ಇಲ್ಲಿ ಎಳೆಯುವ ಪ್ರಯತ್ನ ಮಾಡಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com