ಕೊನೆಗೂ ಮುರಿದು ಬಿತ್ತು ರಾಖಿ ಸಾವಂತ್ 'ಬೆತ್ತಲೆ ಮದುವೆ'

ಬಾಲಿವುಡ್ ಡ್ರಾಮಾ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ರಾಖಿ ಸಾವಂತ್ ಮದುವೆ ಮುರಿದು ಬಿದ್ದಿದೆ.

Published: 07th December 2018 12:00 PM  |   Last Updated: 07th December 2018 12:09 PM   |  A+A-


Rakhi Sawant ENDS her Marriage with Deepak Kalal

ಸಂಗ್ರಹ ಚಿತ್ರ

Posted By : SVN
Source : Online Desk
ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ರಾಖಿ ಸಾವಂತ್ ಮದುವೆ ಮುರಿದು ಬಿದ್ದಿದೆ.

ಹೌದು.. ಈ ಬಗ್ಗೆ ಸ್ವತಃ ರಾಖಿ ಸಾವಂತ್ ಅವರೇ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿಕೊಂಡಿದ್ದು, ದೀಪಕ್ ಕಲಾಲ್ ರನ್ನು ತಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಭಾವಿ ಪತಿ ದೀಪಕ್ ಲಾಲ್ ನಿಂದ ಪಡೆದಿದ್ದ ಒಂದು ಕೋಟಿ ರೂ. ಹಣವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸುವುದಿಲ್ಲ ಎಂದೂ ರಾಖಿ ಸಾವಂತ್ ಸ್ಪಷ್ಟಪಡಿಸಿದ್ದಾರೆ.

ಮದುವೆ ಮುರಿದು ಬಿದ್ದ ಕುರಿತು ರಾಖಿ ಸಾವಂತ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದು, ವಿಡಿಯೋದಲ್ಲಿ ದೀಪಕ್ ಕಲಾಲ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಗೈದಿದ್ದಾರೆ.

'ಕಳೆದ ಕೆಲ ದಿನಗಳಿಂದ ನಾನು ಊಟ ಮಾಡುವುದನ್ನೇ ಬಿಟ್ಟಿದ್ದು, ಗೊಳೋ ಎಂದು ಅತ್ತು ಅತ್ತು ನನ್ನ ಕಣ್ಣಿನ ಕಾಜಲ್ ಕೂಡ ಅಳಿಸಿ ಹೋಗಿದೆ. ಮದುವೆ ಮಾಡಿಕೊಂಡು ಫಸ್ಟ್ ನೈಟ್ ಲೈವ್ ಮಾಡುತ್ತೇನೆ ಎಂದು ಹೇಳಿದ್ದ ನೀನು ನನಗೆ ದೀಪಿಕಾ ಹಾಗೂ ಪ್ರಿಯಾಂಕ ಚೋಪ್ರಾರಂತೆ ಮದುವೆಯಾಗುವುದನ್ನು ತಪ್ಪಿಸಿದ್ದಿಯಾ. ನನ್ನನ್ನು ಮದುವೆ ಆಗುವುದಾಗಿ ಹೇಳಿ ಬೇರೆಯವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿಯಾ' ಎಂದು ಆರೋಪಗಳ ಸುರಿಮಳೆ ಮಾಡಿದ್ದಾರೆ.

ಮದುವೆ ಸಮಾರಂಭಕ್ಕಾಗಿ ನೀನು ನನಗೆ ನೀಡಿದ್ದ 1 ಕೋಟಿ ರೂ.ನಲ್ಲಿ ಶಾಪಿಂಗ್ ಮಾಡಿ 20 ಲಕ್ಷ ಮಾತ್ರ ಉಳಿದುಕೊಂಡಿದೆ. ಮದುವೆ ರಿಂಗ್ ಸೇರದಂತೆ ನೀನು ನನಗೆ ಕೊಟ್ಟಿರುವ ವಧುದಕ್ಷಿಣೆ ಹಣವನ್ನು ವಾಪಸ್ ನೀಡುವುದಿಲ್ಲ.  ನಿನ್ನಿಂದ ಏನಾಗುತ್ತೊ ಮಾಡಿಕೋ. ನಿನ್ನ ನಡೆಯಿಂದ ಮದುವೆ ಮುರಿದು ಬಿದ್ದಿದೆ. ಈಗ ನನ್ನ 10 ಜನ ಬಾಯ್ ಫ್ರೆಂಡ್ಸ್ ಹಾಗೂ ಅಪಾರ ಅಭಿಮಾನಿಗಳಿಗೆ ಉತ್ತರಿಸಬೇಕಿದೆ. ನಾನು ಕಳೆದ 15 ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಉತ್ತಮ ಗೌರವ ಪಡೆದಿದ್ದು, ನನ್ನ ಕುಟುಂಬವನ್ನು ನಾನೇ ನಿರ್ವಹಿಸುತ್ತಿದ್ದೇನೆ. ನಿನ್ನಿಂದ ನನ್ನ ಗೌರವಕ್ಕೆ ದಕ್ಕೆ ಉಂಟಾಗಿದೆ. ನಾನು ಬಹಳ ಸರಳ ಹುಡುಗಿಯಾಗಿದ್ದು, ಸುಳ್ಳು ಹೇಳಲು ಭಯಸುವುದಿಲ್ಲ. ನನ್ನನ್ನು ಕ್ಷಮಿಸು ಎಂದು ರಾಖಿ ಕೇಳಿದ್ದಾರೆ.

ಈ ಹಿಂದೆ ರಾಖಿ ಸಾವಂತ್ ತಿಳಿಸಿದಂತೆ ಡಿಸೆಂಬರ್ 31 ರಂದು ಮದುವೆ ಕಾರ್ಯಕ್ರಮ ನಡೆಯಬೇಕಿತ್ತು. 
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp