ಅಭಿಶೇಕ್ ಅಂಬರೀಶ್ ನಟನೆಯ ಅಮರ್ ಚಿತ್ರದ ಫಸ್ಟ್ ವಿಡಿಯೋ ಏ.6ಕ್ಕೆ ಬಿಡುಗಡೆ!

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಶೇಕ್ ಮತ್ತು ತಾನ್ಯ ಹೋಪ್ ಅಭಿನಯದ ಅಮರ್ ಚಿತ್ರದ ಫಸ್ಟ್ ವಿಡಿಯೋ ಇದೇ ಏಪ್ರಿಲ್ 6ರಂದು ಬಿಡುಗಡೆಯಾಗುತ್ತಿದೆ.
ಅಭಿಶೇಕ್ ಅಂಬರೀಶ್, ತಾನ್ಯ ಹೋಪ್
ಅಭಿಶೇಕ್ ಅಂಬರೀಶ್, ತಾನ್ಯ ಹೋಪ್
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಶೇಕ್ ಮತ್ತು ತಾನ್ಯ ಹೋಪ್ ಅಭಿನಯದ ಅಮರ್ ಚಿತ್ರದ ಫಸ್ಟ್ ವಿಡಿಯೋ ಇದೇ ಏಪ್ರಿಲ್ 6ರಂದು ಬಿಡುಗಡೆಯಾಗುತ್ತಿದೆ.
ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ ಚಿತ್ರದ ಮೊದಲ ಹಾಡು ಬಿಡುಗಡೆಯಾಗುತ್ತಿದೆ. ಅಂಬರೀಶ್ ಅಭಿನಯದ ಒಲವಿನ ಉಡುಗೊರೆ ಹಾಡನ್ನು ಅಮರ್ ಚಿತ್ರಕ್ಕಾಗಿ ರಿಮೇಕ್ ಮಾಡಿದ್ದು ಇದೇ ಹಾಡು ಬಿಡುಗಡೆಯಾಗುತ್ತಿದೆ.
ಸಂಗೀತಾ ಆಡಿಯೋ ಕಂಪನಿ ಚಿತ್ರದ ಆಡಿಯೋ ಹಕ್ಕನ್ನು ಖರೀದಿಸಿದೆ. ಇಷ್ಟು ದಿನ ಬರೀ ಸುದ್ದಿಗಳು ಹಾಗೂ ಫೋಟೋಗಳ ಮೂಲಕ ಅಮರ್ ಚಿತ್ರ ಸುದ್ದಿ ಮಾಡುತ್ತಿತ್ತು. ಇದೀಗ ಚಿತ್ರತಂಡ ವಿಡಿಯೋ ಹಾಡನ್ನು ಬಿಡುಗಡೆ ಮಾಡುತ್ತಿದೆ. ಚಿತ್ರ ಸಂದೇಶ್ ಪ್ರೋಡೆಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು ಚಿತ್ರವನ್ನು ನಾಗಶೇಖರ್ ನಿರ್ದೇಶನ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com