ಶ್ರೀಮುರಳಿಯ 'ಭರಾಟೆ' ವಿಶೇಷ ಹಾಡಿಗೆ ಹೆಜ್ಜೆ ಹಾಕಿದ ರಚಿತಾ, ಶ್ರೀಲೀಲಾ!

ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ವಿಶೇಷ ಹಾಡಿನ ಚಿತ್ರೀಕರಣ ಭರ್ಜರಿಯಾಗಿ ಮುಗಿದಿದೆ. ಈ ಹಾಡಿನಲ್ಲಿ ಶ್ರೀಮುರಳಿ ಸೇರಿದಂತೆ ನಾಯಕಿರಾದ ಶ್ರೀಲೀಲಾ ಮತ್ತು ರಚಿತಾ ರಾಮ್ ಹೆಜ್ಜೆ ಹಾಕಿದ್ದಾರೆ.
ಶ್ರೀಮುರಳಿ
ಶ್ರೀಮುರಳಿ
Updated on: 
ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ವಿಶೇಷ ಹಾಡಿನ ಚಿತ್ರೀಕರಣ ಭರ್ಜರಿಯಾಗಿ ಮುಗಿದಿದೆ. ಈ ಹಾಡಿನಲ್ಲಿ ಶ್ರೀಮುರಳಿ ಸೇರಿದಂತೆ ನಾಯಕಿರಾದ ಶ್ರೀಲೀಲಾ ಮತ್ತು ರಚಿತಾ ರಾಮ್ ಹೆಜ್ಜೆ ಹಾಕಿದ್ದಾರೆ. ಸುಮಾರು 200 ಡ್ಯಾನ್ಸ್ ಕಲಾವಿದರೂ ಹಾಡಿಗೆ ನೃತ್ಯ ಮಾಡಿದ್ದಾರೆ.
ಚೇತನ್ ಕುಮಾರ್ ಎಂದಿಗೂ ತಮ್ಮ ಚಿತ್ರಗಳಲ್ಲಿ ಹೊಸತನವನ್ನು ತರಲು ಬಯಸುತ್ತಾರೆ. ಈಗ ಶ್ರೀಮುರಳಿ ನಾಯಕನಾಗಿರುವ ತಮ್ಮ ಮುಂದಿನ ಚಿತ್ರ "ಭರಾಟೆ"ಯಲ್ಲಿ ಸಹ ಇಂತಹಾ ಅವಕಾಶವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಸಾಬೀತು ಮಾಡಿದ್ದಾರೆ.
ಶ್ರೀಮುರಳಿ ಸೇರಿ ನಟ ನಟಿಯರ ಆಯ್ಕೆಯಿಂದಾಗಿ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲಕ್ಕೆಡೆ ಮಾಡಿರುವ ಚಿಚ್ತ್ರ "ಭರಾಟೆ"ಯಲಿ ಈಗ ರಚಿತಾ ರಾಮ್ ಸಹ ಅಭಿನಯಿಸುತ್ತಿದ್ದಾರೆ. ಹೌದು! ರಚಿತಾ ಶ್ರೀಮುರಳಿ ಜತೆಗೆ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಹಿಂದೆ "ರಥಾವರ" ಚಿತ್ರದಲ್ಲಿ ಶ್ರೀಮುರಳಿ ಹಾಗೂ ರಚಿತಾ ಜತೆಯಾಗಿ ನಟಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಆದರೆ ಈ ಚಿತ್ರದ ಒಂದ್ಯು ಹಾಡಿನಲ್ಲಿ ಮಾತ್ರ ಈ ನಟಿ ಕಾನಿಸಿಕೊಂಡಿದ್ದಾರೆ. ಇನ್ನು ಹಾಡಿನ ಚಿತ್ರೀಕರಣ ಏಪ್ರಿಲ್  2ರಿಂದ ಪ್ರಾರಂಭವಾಗಿದ್ದು ಅದಕ್ಕಾಗಿ ಅದ್ದೂರಿಯಾದ ಸೆಟ್ ತಯಾರಾಗಿತ್ತು.
ಮೋಹನ್ ಬಿ. ಕೆರೆ ಕಲಾ ನಿರ್ದೇಶನದಲ್ಲಿ ಈ ಹಾಡು ಮೂಡಿ ಬರುತ್ತಿದ್ದು ಮೋಹನ್ ಸಂಯೋಜನೆ ಮ್ನಾಡುತ್ತಿದ್ದಾರೆ.
ಈ ಹಾಡಿನಲ್ಲಿ ಸುಮಾರು 200  ಡ್ಯಾನ್ಸರ್ಸ್, ಜೂನಿಯರ್ ಕಲಾವಿದರು ಭಾಗವಹಿಸಲಿದ್ದಾರೆ. ಇನ್ನು ನಿರ್ದೇಶಕ ಚೇತನ್ ಸ್ವತಃ ಈ ಹಾಡು ರಚಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳನ್ನು ಚೇತನ್ ಅವರೇ ಬರೆದಿದ್ದರೆ ಈ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.
ಸಾಯಿ ಕುಮಾರ್, ರವಿ ಶಂಕರ್ ಮತ್ತು ಅಯ್ಯಪ್ಪ ಪಿ. ಶರ್ಮ ಜತೆಗೂಡಿ ಶ್ರೀಲೀಲಾಸುರ್ಪ್ರೀತ್ಸ್ ಪ್ರೊಡಕ್ಷನ್ಸ್ ಹೆಸರಿನ ನಿರ್ಮಾಣ ಸಂಸ್ಥೆಯಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಗಿರೀಶ್ ಗೌಡ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com