ರೈನ್ ಬೋ ನಲ್ಲಿ ಅಜಯ್ ರಾವ್-ಮಾನ್ವಿತ ಕಾಮತ್ ಕಾಂಬಿನೇಶನ್

ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಪಕರಾಗಿ ತಮ್ಮ ಎರಡನೇ ಚಿತ್ರ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದಾರೆ. ಚಿತ್ರದ ಮುಹೂರ್ತ ಆ.9 ರಂದು ನಡೆಯಲಿದೆ.
ರೈನ್ ಬೋ ನಲ್ಲಿ ಅಜಯ್ ರಾವ್-ಮಾನ್ವಿತ ಕಾಮತ್ ಕಾಂಬಿನೇಶನ್
ರೈನ್ ಬೋ ನಲ್ಲಿ ಅಜಯ್ ರಾವ್-ಮಾನ್ವಿತ ಕಾಮತ್ ಕಾಂಬಿನೇಶನ್
Updated on
ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಪಕರಾಗಿ ತಮ್ಮ ಎರಡನೇ ಚಿತ್ರ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದಾರೆ. ಚಿತ್ರದ ಮುಹೂರ್ತ ಆ.9 ರಂದು ನಡೆಯಲಿದೆ. 
ಅಜಯ್ ರಾವ್ ನಾಯಕ ನಟನಾಗಿ ನಟಿಸಲಿರುವ ಚಿತ್ರದ ಟೈಟಲ್ ’ರೈನ್ಬೋ’. ಕಲರ್ಸ್ ಆಫ್ ಕ್ರೈಮ್ ಈ ಚಿತ್ರದ ಟ್ಯಾಗ್ ಲೈನ್. ಈ ಥ್ರಿಲ್ಲರ್ ಚಿತ್ರ ನಿರ್ದೇಶಕ ಎಸ್ ರಾಜವರ್ಧನ್ ಅವರ ಪ್ರಥಮ ಚಿತ್ರವೂ ಆಗಿದೆ. ಗುರು ದೇಶಪಾಂಡೆ ಅವರ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದ ರಾಜವರ್ಧನ್ ಪ್ರಸ್ತುತ ಪ್ರಜ್ವಲ್ ದೇವರಾಜ್ ಅವರ ಜಂಟಲ್ ಮ್ಯಾನ್ ಚಿತ್ರದ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
ಜಿ-ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ರೈನ್ಬೊ ನಿರ್ಮಾಣವಾಗುತ್ತಿದ್ದು, ಟಗರು ಚಿತ್ರದಲ್ಲಿ ನಟಿಸಿದ್ದ ನಟಿ ಮಾನ್ವಿತಾ ಇದೇ ಮೊದಲ ಬಾರಿಗೆ ಅಜಯ್ ರಾವ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ರಿಲ್ಯಾಕ್ಸ್ ಸತ್ಯ, ದಾರಿ ತಪ್ಪಿದ ಮಗ, ನಾಗತಿಹಳ್ಳಿ ಚಂದ್ರಶೇಖರ್ ಅವರ ಇಂಡಿಯಾv/s ಇಂಗ್ಲೆಂಡ್ ತೆರೆ ಕಾಣಲು ಸಿದ್ಧವಾಗಿರುವ, ಮಾನ್ವಿತ ನಟನೆಯ ಮುಂದಿನ ಸಿನಿಮಾಗಳಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com