ರವಿಚಂದ್ರನ್ ನಿರ್ದೇಶನದಲ್ಲಿ ನಟಿಸಲು ನಾನು ರೋಮಾಂಚಿತಳಾಗಿದ್ದೇನೆ: ಕಾವ್ಯಾಶೆಟ್ಟಿ

ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದ ರವಿ ಬೋಪಣ್ಣ ಸಿನಿಮಾದಲ್ಲಿ ನಟಿಸಲು ಎರಡನೇ ಯೋಚನೆಯಿಲ್ಲದೇ ನಟಿ ಕಾವ್ಯಾಶೆಟ್ಟಿ ಒಪ್ಪಿಕೊಂಡಿದ್ದಾರೆ.
ಕಾವ್ಯಾ ಶೆಟ್ಟಿ
ಕಾವ್ಯಾ ಶೆಟ್ಟಿ
Updated on

ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದ ರವಿ ಬೋಪಣ್ಣ ಸಿನಿಮಾದಲ್ಲಿ ನಟಿಸಲು ಎರಡನೇ ಯೋಚನೆಯಿಲ್ಲದೇ ನಟಿ ಕಾವ್ಯಾಶೆಟ್ಟಿ ಒಪ್ಪಿಕೊಂಡಿದ್ದಾರೆ.

ಕೇವಲ ಅವರ ಜೊತೆ ನಟನೆ ಮಾತ್ರವಲ್ಲ, ಅವರ ನಿರ್ದೇಶನದಲ್ಲಿ ಮೊದಲ ಬಾರಿಗೆ ನಟಿಸುತ್ತಿರುವುದರಿಂದ ನಾನು ಥ್ರಿಲ್ ಆಗಿದ್ದೇನೆ ಎಂದು ಹೇಳಿದ್ದಾರೆ.

ರವಿಚಂದ್ರನ್ ಅವರು, ಅಪ್ರತಿಮ ಶೈಲಿಯಲ್ಲಿ ಸಿನಿಮಾ ನಿರ್ದೇಶಿಸುತ್ತಾರೆ, ಆದರೆ ಅವರ ಜೊತೆ ಚಿತ್ರೀಕರಣದಲ್ಲಿ ಭಾಗಿಯಾಗುವುದು ಅಷ್ಟು ಸುಲಭದ ಮಾತಲ್ಲ, ಶೂಟಿಂಗ್ ಯಾವಾಗ ಆರಂಭವಾಗುತ್ತದೆ ಎಂದು ಕಾದು ಕುಳಿತಿರುವುದಾಗಿ ಹೇಳಿದ್ದಾರೆ.

ನನಗೆ ಯಾವ ರೀತಿಯ ಪಾತ್ರ ನೀಡಲಿದ್ದಾರೆ ಎಂಬುದನ್ನು ನೋಡಲು ಕಾತುರಳಾಗಿದ್ದೇನೆ,ಅವರ ಜೊತೆ ಪಾತ್ರದ ಸಂಬಂಧ ದಿನನಿತ್ಯ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.

ನಾನು ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದೆ.ಆದರೆ ನಾನು ಅವರ ಜೊತೆ ನಟಿಸುತ್ತೇನೆ ಎಂದು ಯಾವತ್ತೂ ಯೋಚಿಸಿರಲಿಲ್ಲ, ಎಲ್ಲವೂ ಬೇಗಬೇಗವಾಗಿ ಮುಗಿದು ಹೋಯಿತು. ಪ್ರಾಜೆಕ್ಟ್ ಬಗ್ಗೆ ಚರ್ಚಿಸಿ ನಾನು ಯುರೋಪ್ ಗೆ ತೆರಳಿದ್ದೆ, ನಾನು ವಾಪಸ್ ಬಂದಾಗ ಸಿನಿಮಾದಲ್ಲಿ ನಾನು ಇರುವುದಾಗಿ ವಿಷಯ ತಿಳಿಯಿತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com