ಗುರುನಂದನ್ ಮುಂದಿನ ಚಿತ್ರಕ್ಕೆ ಹರಿಪ್ರಿಯಾ ನಾಯಕಿ? 

ಗುರುನಂದನ್ ಅವರ ಇನ್ನೂ ಹೆಸರಿಡದ ಚಿತ್ರವನ್ನು ಜಯಣ್ಣ ನಿರ್ಮಿಸುತ್ತಿದ್ದು ಚಿತ್ರದ ಕೆಲಸಗಳು ಈಗಾಗಲೇ ಆರಂಭವಾಗಿದೆ. 
ಹರಿಪ್ರಿಯಾ
ಹರಿಪ್ರಿಯಾ
Updated on

ಗುರುನಂದನ್ ಅವರ ಇನ್ನೂ ಹೆಸರಿಡದ ಚಿತ್ರವನ್ನು ಜಯಣ್ಣ ನಿರ್ಮಿಸುತ್ತಿದ್ದು ಈಗಾಗಲೇ ಚಾಲನೆ ಸಿಕ್ಕಿದೆ. ನಾಯಕಿಯಾಗಿ ಹರಿಪ್ರಿಯಾ ಅವರು ನಟಿಸುವ ಸಾಧ್ಯತೆಯಿದ್ದು ಚಿತ್ರತಂಡ ಅವರನ್ನು ಸಂಪರ್ಕಿಸಿ ಮಾತುಕತೆಯಾಗಿದೆ.


ವಿಜಯ್ ಕಿರಣ್ ನಿರ್ದೇಶನದ ಈ ಚಿತ್ರಕ್ಕೆ ಹರಿಪ್ರಿಯಾ ಅವರು ನಾಯಕಿಯಾಗಿ ಅಬಿನಯಿಸಲು ಈಗಾಗಲೇ ಮಾತುಕತೆ ನಡೆದಿದೆ.

ಅವರು ಈಗಾಗಲೇ ಸೃಜನ್ ಲೋಕೇಶ್ ಜೊತೆ ಎಲ್ಲಿದ್ದೆ ಇಲ್ಲಿ ತನಕ ಮತ್ತು ಕನ್ನಡ ಗೊತ್ತಿಲ್ಲ ಚಿತ್ರದಲ್ಲಿನ ಅಭಿನಯ ಮುಗಿಸಿದ್ದಾರೆ. 


ಕಾಮಿಡಿ ಡ್ರಾಮಾ ಆಗಿರುವ ಈ ಸಿನಿಮಾದಲ್ಲಿ ಸಾಧು ಕೋಕಿಲ, ಕಡ್ಡಿಪುಡಿ ಚಂದ್ರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com