ಟಗರು, ರುಸ್ತುಂ ಚಿತ್ರಗಳಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು, 2020ರಲ್ಲಿ ತೆರೆಗೆ ಬರಲಿರುವ ಮತ್ತೊಂದು ಚಿತ್ರದಲ್ಲಿಯೂ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಲಲಿದ್ದಾರೆ. ಶಿವಣ್ಣನ ಈ ಚಿತ್ರಕ್ಕ ನಾಯಕಿಯಾಗಿ 'ರಾಜಕುಮಾರ'ನ ನಾಯಕಿ ಪ್ರಿಯಾ ಆನಂದ್ ಕಾಣಿಸಿಕೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.
ಚಿತ್ರವನ್ನು ವಿಶ್ವಾಸಂ ನಂತಹ ಹಿಟ್ ಸಿನಿಮಾ ನಿರ್ಮಿಸಿದ್ದ ಸತ್ಯಜ್ಯೋತಿ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದ್ದು, ಬಹುಭಾಷಆ ನಟಿ ಪ್ರಿಯಾ ಆನಂದ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಪುನೀತ್ ರಾಜ್ ಕುಮಾರ್ ನಟನೆಯ ರಾಜಕುಮಾರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಪ್ರಿಯಾ ಅವರು, ಮೊದಲ ಯತ್ನದಲ್ಲಿಯೇ ದೊಡ್ಡ ಹೆಸರು ಗಳಿಸಿದ್ದರು. ಇದಾದ ಬಳಿಕ ಕಳೆದ ವರ್ಷ ತೆರೆ ಕಂಡಿದ್ದ ಆರೆಂಜ್ ಚಿತ್ರದಲ್ಲಿಯೂ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಾಯಕಿಯಾಗಿದ್ದರು. ಶಿವಣ್ಣ ನಟನೆಯ ಟಗರು ಚಿತ್ರಕ್ಕೆ ಸಖತ್ ಆಗಿ ಸಂಗೀತ ನೀಡಿದ್ದ ಚರಣ್ ರಾಜ್ ಅವರು ಈ ಬಾರಿಯೂ ಒಂದಾಗಿದ್ದಾರೆ. ಹೀಗಾಗಿ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿದೆ.
Advertisement