ಇಷ್ಟಕ್ಕೂ ಆ ನಟಿ ಯಾರು ಎಂಬ ಪ್ರಶ್ನೆಗೆ ಉತ್ತರ, ದಕ್ಷಿಣ ಭಾರತದ ಉದಯೋನ್ಮುಖ ನಟಿ ಸಾಕ್ಷಿ ಚೌದರಿ.. ಹೌದು ಕನ್ನಡದಲ್ಲಿ ಸುವರ್ಣ ಸುಂದರಿ ಎಂಬ ಚಿತ್ರದಲ್ಲಿ ನಟಿಸಿರುವ ನಟಿ ಸಾಕ್ಷಿ ಚೌದರಿ ತಮಗೆ ಒಂದು ರಾತ್ರಿಗೆ 1 ಕೋಟಿ ರೂ ಆಫರ್ ನೀಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಟ್ವಿಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸಾಕ್ಷಿ, 'ನನ್ನ ವಿಡಿಯೋ ಮತ್ತು ಫೋಟೋಗಳನ್ನ ನೋಡಿದ ಕೆಲವು ಜನರು ಹುಚ್ಚರಾಗಿದ್ದಾರೆ. ನನಗೆ ಒಂದು ರಾತ್ರಿಗೆ ಒಂದು ಕೋಟಿ ಕೊಡುತ್ತೇನೆ ಎಂದು ಇನ್ ಬಾಕ್ಸ್ ಮಲ್ಲಿ ಮೆಸೇಜ್ ಮಾಡುತ್ತಿದ್ದಾರೆ. ಆದರೆ ಅವರೆಲ್ಲರೂ ಮೂರ್ಖರು. ಯಾಕೆಂದರೆ ನಾನು ಮಾರಾಟಕ್ಕಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.