ಪುನೀತ್ ನಟನೆಯ ಯುವರತ್ನ ಸಿನಿಮಾದಲ್ಲಿ ಸಯ್ಯೇಶಾ?

ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಸಿನಿಮಾ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಈಗಾಗಲ್ ಭಾರೀ ಹವಾ ಸೃಷ್ಟಿ ಮಾಡುತ್ತಿದೆ. ರಾಜಕುಮಾರ ದಂತ ಹಿಟ್ ...
ಪುನೀತ್ ಮತ್ತು ಸಯ್ಯೇಶಾ
ಪುನೀತ್ ಮತ್ತು ಸಯ್ಯೇಶಾ
ಸಂತೋಷ್ ಆನಂದ್ ರಾಮ್ ನಿರ್ದೇಶನದ  ಯುವರತ್ನ ಸಿನಿಮಾ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಈಗಾಗಲ್ ಭಾರೀ ಹವಾ ಸೃಷ್ಟಿ ಮಾಡುತ್ತಿದೆ. ರಾಜಕುಮಾರ ದಂತ ಹಿಟ್ ಸಿನಿಮಾ ನೀಡಿದ ಜೋಡಿ ಮತ್ತೊಂದು ಸೂಪರ್ ಹಿಟ್ ಚಿತ್ರ ನೀಡಲು ಸಿದ್ಧತೆ ನಡೆಸುತ್ತಿದೆ.
ಕೆಜಿಎಫ್ ಚಿತ್ರ ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಯುವರತ್ನ ಸಿನಿಮಾ ನಿರ್ಮಾಣ ಮಾಡುತ್ತಿದೆ, ಸದ್ಯ ಪುನೀತ್ ನಟನೆಯ ನಟಸಾರ್ವಭೌಮ ಈ ವಾರ ರಿಲೀಸ್ ಆಗುತ್ತಿದೆ, ಫೆಬ್ರವರಿ 14 ರಂದು ಯುವರತ್ನ ಸಿನಿಮಾದ ಮೇಜರ್ ಸನ್ನಿವೇಶದ ಚಿತ್ರೀಕರಣ ನಡೆಯಲಿದೆ, ಇದೇ ವೇಳೆ ಸಿನಿಮಾ ನಾಯಕಿ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.
ನಾಯಕಿಯ ಅದಿಕೃತವಾಗಿ ಪ್ರಕಟಿಸಲು ಪ್ರೊಡಕ್ಷನ್ ಹೌಸ್ ಕಾಯುತ್ತಿದೆ, ಯುವರತ್ನ ಸಿನಿಮಾದಲ್ಲಿ ಪುನೀತ್ ಕಾಲೇಜ್ ವಿದ್ಯಾರ್ಥಿಯ ಪಾತ್ರದಲ್ಲಿ ನಟಿಸಿದ್ದಾರೆ. ಪುನೀತ್ ಗೆ ಸಯ್ಯೇಶಾ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಹಲವು ನಾಯಕಿಯರ ಹೆಸರು ಕೇಳಿ ಬಂದಿದ್ದವು, ಆದರೆ ಸಯ್ಯೇಶಾ ಹೆಸರು ಫೈನಲ್ ಆಗಿದೆ ಎಂದು ತಿಳಿದು ಬಂದಿದೆ. ಸಾಯಿರಾ ಬಾನು ಮತ್ತು ದಿಲೀಪ್ ಕುಮಾರ್ ಅವರ ಸೋದರಸೊಸೆ ಸಯ್ಯೇಶಾ ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 
ಆರ್ಯ ಜೊತೆ ಗಜನಿಕಾಂತ್ ಸಿನಿಮಾದಲ್ಲಿ ನಟಿಸಿದ್ದರು, ಹಲವು ಸಿನಿಮಾ ನಿರ್ಮಾಪಕರು ಸಯ್ಯೇಶಾ ಅವರನ್ನು ಕನ್ನಡಕ್ಕೆ ತರಲು ಪ್ರಯತ್ನ ನಡೆಸಿದ್ದರು, ಆದರೆ ಯುವರತ್ನ ಮೂಲಕ ಕನ್ನಡದಲ್ಲಿ ಮೊದಲ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com