1961ರಲ್ಲಿ ಚಿತ್ರಮಂದಿರವನ್ನು ಹರಾಜು ಹಾಕಲಾಗಿತ್ತು. ಆಗ ನಂದಲಾಲ್ ಕಪೂರ್ ಎನ್ನುವಾತ ಎಂಟು ಲಕ್ಷ ರು.ಗೆ ಚಿತ್ರಮಂದಿರ ಖರೀದಿಸಿದ್ದರು.1962ರಲ್ಲಿ ಈ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿದ್ದ "ಸ್ಲೀಪಿಂಗ್ ಬ್ಯೂಟಿ" ಚಿತ್ರಕ್ಕೆ ಅಪಾರ ಜನಮೆಚ್ಚುಗೆ ಬಂದಿತ್ತು. ಹಾಲಿವುಡ್, ಬಾಲಿವುಡ್, ತೆಲುಗು, ತಮಿಳು, ಕನ್ನಡ ಭಾಷೆಯ ಚಿತ್ರಗಳು ಪ್ರದರ್ಶನ ಕಾಣುತ್ತಿದ್ದ ಈ ಚಿತ್ರಮಂದಿರದ ಕಟ್ಟಡ ಬ್ರಿಟಿಷರ ಕಾಲದ್ದಾಗಿದ್ದು ಮಾಲೀಕರು ಇದನ್ನು ಕೆಡವುವ ನಿರ್ಧಾರ ತಳೆದಿದ್ದಾರೆ.