ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ 200 ಕೋಟಿ ಗಳಿಸುವ ಮೂಲಕ ಐತಿಹಾಸಿಕ ದಾಖಲೆ ಬರೆದಿರುವ ಕೆಜಿಎಫ್ ಚಿತ್ರದೇಶಾದ್ಯಂತ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿ ಆರ್ಭಟಿಸುತ್ತಿದ್ದು ಇದೀಗ 25ನೇ ದಿನ ಯಶಸ್ವಿಯಾಗಿ ಪೂರೈಸಿದೆ. ಇನ್ನು ಇದೇ ಮೊದಲ ಬಾರಿಗೆ ಚಿತ್ರತಂಡ ಮಾಧ್ಯಮದ ಮುಂದೆ ಬಂದಿದೆ.
ಕೆಜಿಎಫ್ ಚಿತ್ರ ಭವ್ಯ, ಬೀಭತ್ಸ ಭಯಂಕರ ಚಿತ್ರವಾಗಿದೆ. ಇಂತಹ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದಕ್ಕೆ ನಿಜಕ್ಕೂ ನಾನು ಧನ್ಯ. ಇಂದು ಚಿತ್ರ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. ಇನ್ನು ನಾವೆಲ್ಲ ಒಂದೊಂದೆ ಹೆಜ್ಜೆ ಏರಿದರೆ. ಯಶ್ ಒಂದೇ ಬಾರಿ 10 ಹೆಜ್ಜೆ ಏರಿದ್ದಾರೆ ಎಂದರು.
ನಂತರ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ಅವರ ಅರ್ಪಣಾ ಭಾವ ಹಾಗೂ ಅವರ ಕುಟುಂಬದ ಸಹಕಾರಕ್ಕೆ ಧನ್ಯವಾದ ಹೇಳಿದರು. ಹಾಗೆ ಇಂತಹದ್ದೊಂದು ಪ್ರಯತ್ನಕ್ಕೆ ಹಣ ಹೂಡಲು ಧೈರ್ಯ ಮಾಡಿದ ನಿರ್ಮಾಪಕ ವಿಜಯ್ ಕಿರಗಂದೂರು ಅವರನ್ನ ನಿಜವಾದ ನಾಯಕ ಎಂದು ಹೇಳಿದರು.