ಗೂಗಲ್ ಪ್ರಕಾರ ನಟ ಯಶ್ 'ನ್ಯಾಷನಲ್ ಸ್ಟಾರ್'

ಕನ್ನಡ ಚಿತ್ರರಂಗದಲ್ಲಿ ರಾಮಾಚಾರಿ ಮೂಲಕ ಸ್ಟಾರ್ ನಟರಾಗಿದ್ದ ರಾಕಿಂಗ್ ಸ್ಟಾರ್ ಯಶ್, ಇದೀಗ ತಮ್ಮ ನೂತನ ಬ್ಲಾಕ್ ಬಸ್ಚರ್ ಚಿತ್ರ ಕೆಜಿಎಫ್ ಮೂಲಕ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಅರೆ ಈ ಮಾತನ್ನು ನಾವು ಹೇಳುತ್ತಿರುವುದಲ್ಲ.. ಸ್ವತಃ ಗೂಗಲ್ ಹೇಳುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ರಾಮಾಚಾರಿ ಮೂಲಕ ಸ್ಟಾರ್ ನಟರಾಗಿದ್ದ ರಾಕಿಂಗ್ ಸ್ಟಾರ್ ಯಶ್, ಇದೀಗ ತಮ್ಮ ನೂತನ ಬ್ಲಾಕ್ ಬಸ್ಚರ್ ಚಿತ್ರ ಕೆಜಿಎಫ್ ಮೂಲಕ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಅರೆ ಈ ಮಾತನ್ನು ನಾವು ಹೇಳುತ್ತಿರುವುದಲ್ಲ.. ಸ್ವತಃ ಗೂಗಲ್ ಹೇಳುತ್ತಿದೆ.
ಹೌದು...ನಟ ಯಶ್​.. ಕನ್ನಡಿಗರ ಪಾಲಿಗೆ 'ರಾಕಿಂಗ್ ಸ್ಟಾರ್' ಅಂತಲೇ ಚಿರಪರಿಚಿತರಾಗಿರುವ ನಟ. ಆದರೆ ಅದ್ಯಾವಾಗ 'ಕೆಜಿಎಫ್​' ತೆರೆಗೆ ಅಪ್ಪಳಿಸಿತೋ ಎಲ್ಲವೂ ಇತಿಹಾಸವಾಗಿ ಬಿಟ್ಟಿದೆ. ಯಶ್​ ಇಡುವ ಪ್ರತಿ ಹೆಜ್ಜೆಯೂ ದಾಖಲೆಯಾಗುತ್ತಿದೆ. ಇಲ್ಲಿಯವರೆಗೂ 'ರಾಕಿಂಗ್ ಸ್ಟಾರ್​' ಎನಿಸಿಕೊಂಡಿದ್ದ ಯಶ್ ಇದೀಗ​ ‘ನ್ಯಾಷನಲ್​ ಸ್ಟಾರ್’ ಆಗಿಬಿಟ್ಟಿದ್ದಾರೆ. 
ನಾವು ಯಾವುದೇ ಮಾಹಿತಿ ಬೇಕಿದ್ರೂ 'ಗೂಗಲ್' ಮೊರೆ ಹೋಗ್ತೀವಿ. ಗೂಗಲ್ ಸರ್ಚ್​ನಲ್ಲಿ ನಮಗೆ ಅಗತ್ಯವಾಗಿರೋ ವಿಷಯವನ್ನು ಸರ್ಚ್ ಮಾಡಲು ಬಳಸುತ್ತೇವೆ. ಇದೀಗ ಈ ಗೂಗಲ್ ಸರ್ಚ್ ನಲ್ಲಿ 'ನ್ಯಾಷನಲ್ ಸ್ಟಾರ್' ಎಂದು ಟೈಪಿಸಿದರೆ 'ನ್ಯಾಷನಲ್ ಸ್ಟಾರ್ ಯಶ್' ಎಂಬ ಉತ್ತರ ಸಿಗುತ್ತಿದೆ. ಗೂಗಲ್​ ಸರ್ಚ್ ನಲ್ಲಿ ‘ನ್ಯಾಷನಲ್​ ಸ್ಟಾರ್​ ಯಶ್’ ಎಂಬ ಸರ್ಚ್​ ಕೀ ಹೆಚ್ಚಾಗಿದ್ದು, ಈ ಮೂಲಕ ಜಗತ್ತು ‘ರಾಕಿ’ಯನ್ನು ನ್ಯಾಷನಲ್ ಸ್ಟಾರ್ ಅಂತಲೇ ಗುರುತಿಸುತ್ತಿದೆ. 
ಪಟ್ಟಿಯಲ್ಲಿ ನಟ ಕಿಚ್ಚಾ ಸುದೀಪ್ ಕೂಡ..
ಇನ್ನು ಕನ್ನಡದ ಮತ್ತೋರ್ವ ಸೂಪರ್ ಸ್ಟಾರ್ ನಟ ಕಿಚ್ಚಾ ಸುದೀಪ್ ಅವರ ಹೆಸರನ್ನೂ ಕೂಡ ನ್ಯಾಷನಲ್ ಸ್ಟಾರ್ ಪಟ್ಟಿಯಲ್ಲಿ ತೋರಿಸಲಾಗುತ್ತಿದ್ದು, ಈ ಹಿಂದೆ ನಟ ಸುದೀಪ್  ಎಸ್ ಎಸ್ ರಾಜಮೌಳಿ ಅವರ ಈಗ ಎಂಬ ಚಿತ್ರದ ಮೂಲಕ ದೇಶಾದ್ಯಂತ ಖ್ಯಾತಿ ಗಳಿಸಿದ್ದರು. ಇದಕ್ಕೂ ಮೊದಲು ಸುದೀಪ್ ಹಿಂದಿಯ ರಣ್, ಪೂಂಕ್, ಪೂಂಕ್ 2 ಚಿತ್ರಗಳಲ್ಲಿ ನಟಿಸಿ ಹಿಂದಿ ಪ್ರೇಕ್ಷಕರ ಅಭಿಮಾನ ಗಳಿಸಿದ್ದರು.
ಈ ಹಿಂದೆ ಇದೇ ರೀತಿ ಅಂದರೆ ಬಾಹುಬಲಿ ಚಿತ್ರ ಬಿಡುಗಡೆಯಾದಾಗ ತೆಲುಗು ನಟರಾದ ಪ್ರಭಾಸ್​ ಮತ್ತು ಈಗ ಚಿತ್ರ ರಿಲೀಸ್ ಆದಾಗ ನಾನಿ ಅವರ ಹೆಸರುಗಳು ‘ನ್ಯಾಷನಲ್​ ಸ್ಟಾರ್​’ ಸರ್ಚ್​ ಕೀನಲ್ಲಿ ಕಾಣಿಸಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com