ಕುರುಕ್ಷೇತ್ರಕ್ಕೆ ಶನಿಬಲ ಇಲ್ವ: ಟ್ರೈಲರ್ ನೋಡಿದ ಡಿ ಬಾಸ್ ಅಭಿಮಾನಿಗಳು ಗರಂ!
ಇದೇ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೌರಾಣಿಕ ದುರ್ಯೋದನ ಪಾತ್ರದಲ್ಲಿ ತೆರೆಯ ಮೇಲೆ ವಿಜೃಂಬಿಸಲಿದ್ದು ಚಿತ್ರದ ಟ್ರೈಲರ್ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು ಟ್ರೈಲರ್ ನೋಡಿದ ಡಿಬಾಸ್...
ಬೆಂಗಳೂರು: ಇದೇ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೌರಾಣಿಕ ದುರ್ಯೋದನ ಪಾತ್ರದಲ್ಲಿ ತೆರೆಯ ಮೇಲೆ ವಿಜೃಂಬಿಸಲಿದ್ದು ಚಿತ್ರದ ಟ್ರೈಲರ್ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು ಟ್ರೈಲರ್ ನೋಡಿದ ಡಿಬಾಸ್ ಅಭಿಮಾನಿಗಳು ಸಖತ್ ಗರಂ ಆಗಿದ್ದಾರೆ.
ದರ್ಶನ್ ಅಭಿನಯದ 50ನೇ ಚಿತ್ರ ಇದಾಗಿದ್ದು ಇದರಿಂದಾಗಿ ಚಿತ್ರದ ಡಿಬಾಸ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಟ್ರೈಲರ್ ನೋಡಿದ ಅಭಿಮಾನಿಗಳು ಮಾತ್ರ ಟ್ರೈಲರ್ ಟೀಸರ್ ನಂತಿದ್ದು ತುಂಬಾ ಕೆಟ್ಟದಾಗಿದೆ ಎಂದು ನಿರ್ಮಾಪಕ ಮುನಿರತ್ನ ಅವರನ್ನು ಟ್ರಾಲ್ ಮಾಡುತ್ತಿದ್ದಾರೆ.
ಕಳೆದ ಎರಡು ಟೀಸರ್ ಗಳನ್ನು ಜೋಡಿಸಿ ಈ ಟ್ರೈಲರ್ ಮಾಡಲಾಗಿದೆ. ಇಂತಹ ಕೆಟ್ಟ ಟ್ರೈಲರ್ ಮಾಡಲು ನೀವೇ ಬೇಕಿತ್ತ ಎಂದೆಲ್ಲ ದರ್ಶನ್ ಅಭಿಮಾನಿಗಳು ನಿರ್ಮಾಪಕರನ್ನು ಟ್ರೋಲ್ ಮಾಡುತ್ತಿದ್ದಾರೆ.
ಸ್ಯಾಂಡಲ್ವುಡ್ ನಲ್ಲಿ ಕೆಜಿಎಫ್ ಚಿತ್ರ ಬಂದ ನಂತರ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ನೋಡುತ್ತಿದೆ. ಇಂತಹ ಸಮಯದಲ್ಲಿ 1.50 ನಿಮಿಷದ ಟ್ರೈಲರ್ ನಲ್ಲಿ ಕೇವಲ ಮುನಿರತ್ನ ಅವರ ಹೆಸರು ಹಾಗೂ ಡಬ್ಬಾ ಕ್ವಾಲಿಟಿಯ ಟೈಟಲ್ ಮಾಡಿದ್ದೀರಾ ಇಂತಹ ಕಳಪೆ ಮಟ್ಟದ ಟೈಲರ್ ಮಾಡಿದ್ದೀರಾ ಎಂದು ಕಿಡಿಕಾರಿದ್ದಾರೆ.