ದಿಶಾ ಮದನ್
ದಿಶಾ ಮದನ್

ತಾಯಿಯಾದ 'ಕುಲವಧು' ವಚನಾ: ಮಗುವಿನ ಫೋಟೋ ಹಂಚಿಕೊಂಡ ನಟಿ ದಿಶಾ ಮದನ್

ಕುಲವಧು ವಚನಾ ಖ್ಯಾತಿಯ ನಟಿ ದಿಶಾ ಮದನ್ ತಾಯಿಯಾಗಿದ್ದಾರೆ.
ಕುಲವಧು ವಚನಾ ಖ್ಯಾತಿಯ ನಟಿ ದಿಶಾ ಮದನ್ ತಾಯಿಯಾಗಿದ್ದಾರೆ. ನಟಿ ಗಂಡು  ಮಗುವಿಗೆ ಜನ್ಮ ನೀಡಿದ್ದು ಶನಿವಾರ ಅಂದರೆ ಜುಲೈ 27 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು.
ಸೋಮವಾರ ಇನ್‍ಸ್ಟಾಗ್ರಾಂನಲ್ಲಿ  ತಮ್ಮ ಮಗುವಿನ ಫೋಟೋ ಹಾಕಿಕೊಂಡಿರುವ ನಟಿ ಇದಕ್ಕೆ ‘ಬುಬ್ಬಾ ವಿ’ ಎಂಬ ಶೀರ್ಷಿಕೆ ನೀಡಿದ್ದಾರೆ.
ಇದಕ್ಕೆ ಮುನ್ನ ತಾವು ತಾಯಿಯಾಗುತ್ತಿರುವ ಬಗೆಗೆ ಸಹ ನಟಿ ದಿಶಾ ಇನ್‍ಸ್ಟಾಗ್ರಾಂನಲ್ಲಿ  ಹಂಚಿಕೊಂಡಿದ್ದರು. 
"ಕುಲವಧು" ಧಾರಾವಾಹಿಯ ವಚನಾ ಪಾತ್ರಧಾರಿಯಾಗಿದ್ದ ದಿಶಾ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸಹ ಪಾಲ್ಗೊಂಡು ವೀಕ್ಷಕರ ಮನ ಗೆದ್ದಿದ್ದರು. ಇದೀಗ ತಾಯಿಯಾಗಿರುವ ನಟಿಗೆ ಅವರ ಬಂಧುವರ್ಗ, ಆತ್ಮೀಯರು, ಸ್ನೇಹಿತರು ಸೇರಿ ಅನೇಕ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com