ರಾಗಿಣಿ ಚಂದ್ರನ್ ಚೊಚ್ಚಲ ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್!

ರಾಗಿಣಿ ಚಂದ್ರನ್ ಅವರ ಚೊಚ್ಚಲ ಸ್ಯಾಂಡಲ್ ವುಡ್ ಪ್ರವೇಶಕ್ಕಾಗಿ ರಘು ಸಮರ್ಥ ಆಕ್ಷನ್ ಕಟ್ ಹೇಳುತ್ತಿದ್ದು ಚಿತ್ರಕ್ಕೆ "ಲಾ" ಎಂದು ಹೆಸರಿಡಲಾಗಿದೆ.ವಿ
ರಾಗಿಣಿ ಚಂದ್ರನ್
ರಾಗಿಣಿ ಚಂದ್ರನ್
Updated on
ಬೆಂಗಳೂರು: ರಾಗಿಣಿ ಚಂದ್ರನ್ ಅವರ ಚೊಚ್ಚಲ ಸ್ಯಾಂಡಲ್ ವುಡ್ ಪ್ರವೇಶಕ್ಕಾಗಿ ರಘು ಸಮರ್ಥ ಆಕ್ಷನ್ ಕಟ್ ಹೇಳುತ್ತಿದ್ದು ಚಿತ್ರಕ್ಕೆ "ಲಾ" ಎಂದು ಹೆಸರಿಡಲಾಗಿದೆ.ವಿಶೇಷವೆಂದರೆ ಪುನೀತ್ ರಾಜ್ ಕುಮಾರ್ ಅವರ ಹೋಂ ಬ್ಯಾನರ್ ಪಿಆರ್ ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಈ ಚಿತ್ರ ತಯಾರಾಗುತ್ತಿದೆ. ಇದೊಂದು ಕ್ರೈಂ ಥ್ರಿಲ್ಲರ್ ಚಿತ್ರವಾಗಿದ್ದು ರಘು ಮಹಿಳಾ ಪ್ರಧಾನ ಕಥೆಯನ್ನು ಹೊಂದಿರುವ ತಮ್ಮ ಚಿತ್ರಕ್ಕೆ ಸೂಕ್ತ ಶೀರ್ಷಿಕೆ ಹುಡುಕುತ್ತಿರುವಾಗಲೇ "ಲಾ" ಎಂಬ ಶೀರ್ಷಿಕೆ ಕಥೆಗೆ ತಕ್ಕುದಾಗಿದೆ ಎಂದು ಭಾವಿಸಿದ್ದಾರೆ.
"ರಾಗಿಣಿ ಒಬ್ಬ ಕಾನೂನು ಪದವೀಧರರಾಗಿದ್ದು ಆಕೆ ವೈಯುಕ್ತಿಕ ಕಾರಣಗಳಿಂದ ತನ್ನದೇ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿರುತ್ತಾರೆ. ಹೀಗಾಗಿ ಚಿತ್ರಕ್ಕೆ ಈ ಶೀರ್ಷಿಕೆ ಅತ್ಯಂತ ಸೂಕ್ತವೆಂದು ನಾನು ಭಾವಿಸುತ್ತೇನೆ" ನಿರ್ದೇಶಕರು ಹೇಳಿದ್ದಾರೆ.
ಇನ್ನು ಈ ಕ್ರೈಂ ರೊಮ್ಯಾಂಟಿಕ್ ಚಿತ್ರದಲ್ಲಿ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ನ್ಯಾಯಾಧೀಶರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಚಿತ್ರ ಇದಾಗಲೇ ಎಡಿಟಿಂಗ್ ಪೂರ್ಣಗೊಳಿಸಿದ್ದು ಡಬ್ಬಿಂಗ್ ನಡೆಯುತ್ತಿದೆ ಎಂದು ಅವರು ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com