ಹೋಟೆಲ್​ ಬಿಲ್​ ಕೊಡದೆ ಕಾಲ್ಕಿತ್ತ 'ಮಳೆ ಹುಡುಗಿ'; ನಟಿ ಪೂಜಾ ಗಾಂಧಿ ವಿರುದ್ಧ ದೂರು ದಾಖಲು!

ಖ್ಯಾತ ಸ್ಯಾಂಡಲ್ ವುಡ್ ನಟಿ ಪೂಜಾ ಗಾಂಧಿ ಹೊಟೆಲ್ ಬಿಲ್ ಕಟ್ಟದೇ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಖ್ಯಾತ ಸ್ಯಾಂಡಲ್ ವುಡ್ ನಟಿ ಪೂಜಾ ಗಾಂಧಿ ಹೊಟೆಲ್ ಬಿಲ್ ಕಟ್ಟದೇ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
ಹೌದು.. ನಟಿ ಪೂಜಾ ಗಾಂಧಿ ವಿರುದ್ದ ಹೋಟೆಲ್ ಬಿಲ್ ಕಟ್ಟದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೂಲಗಳ ಪ್ರಕಾರ ಮಾರ್ಚ್​ 11ರಂದೇ ಪೂಜಾ ಗಾಂಧಿ ವಿರುದ್ದ ದೂರು ದಾಖಲಾಗಿದ್ದು, ಖಾಸಗಿ ಹೊಟೆಲ್ ನಲ್ಲಿ ವಾಸ್ತವ್ಯವಿದ್ದ ನಟಿ ಪೂಜಾ ಗಾಂಧಿ ಬಿಲ್ ಕಟ್ಟದೇ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ ಬೇರೊಬ್ಬರ ಹೆಸರಲ್ಲಿ ನಟಿ ಪೂಜಾ ಗಾಂಧಿ ನೀಡಿದ್ದ ಚೆಕ್ ಕೂಡ ಬೌನ್ಸ್ ಆಗಿದೆ ಎಂದು ಹೊಟೆಲ್ ಸಿಬ್ಬಂದಿ ಆರೋಪಿಸಿದ್ದಾರೆ.
ನಟಿ ಪೂಜಾ ಗಾಂಧಿ ವಿರುದ್ಧ ಬರೊಬ್ಬರಿ 3 ಲಕ್ಷದ 53 ಸಾವಿರ ಲಕ್ಷ ಬಿಲ್ ಕಟ್ಟದ ಆರೋಪ ಮಾಡಲಾಗಿದೆ. ನಟಿ ಪೂಜಾ ಹಲವು ದಿನಗಳ ಕಾಲ ಅಶೋಕ ಹೋಟೆಲ್ ನ ರೂಮ್​ನಲ್ಲಿ ತಂಗಿದ್ದು, ನಂತರ ಬಿಲ್ ಕಟ್ಟದೆ ನಟಿ ಪೂಜಾಗಾಂಧಿ ಕಾಲ್ಕಿತ್ತಿದ್ದರು ಎನ್ನಲಾಗಿದೆ. ಕೂಡಲೇ ಪೊಲೀಸರು ಪೂಜಾಗಾಂಧಿಯವರನ್ನು ಠಾಣೆಗೆ ಕರೆಸಿಕೊಂಡು ದೂರಿಗೆ ಸಂಬಂಧಪಟ್ಟಂತೆ ಮಾಹಿತಿ ಪಡೆದುಕೊಂಡಿದ್ದಾರೆ, ನಟಿ ಪೂಜಾಗಾಂಧಿ ಪೊಲೀಸರ ಸಮ್ಮುಖದಲ್ಲಿಯೇ ಎರಡು ಲಕ್ಷ ರೂ.ಗಳನ್ನು ಕೊಟ್ಟು ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ.
ಪ್ರಕರಣದಲ್ಲಿ ಬಿಜೆಪಿ ಮುಖಂಡನ ಹೆಸರು ತಳುಕು!
ಇನ್ನು ಈ ವಂಚನೆ ಪ್ರಕರಣದಲ್ಲಿ ಬಿಜೆಪಿ ಮುಖಂಡನ ಹೆಸರೂ ಕೂಡ ಕೇಳಿ ಬಂದಿದ್ದು, ಪೂಜಾ ಗಾಂಧಿ ಹಾಗೂ ಬಿಜೆಪಿ ಮುಖಂಡ ಅನಿಲ್​ ಪಿ. ಮೆಣಸಿನಕಾಯಿ ಒಂದು ವರ್ಷ ದಿ ಲಲಿತ್ ಅಶೋಕದಲ್ಲೇ ವಾಸ್ತವ್ಯ ಹೂಡಿದ್ದು, ಅಲ್ಲಿಂದ ಸೇವೆಯನ್ನು ಪಡೆದುಕೊಂಡಿದ್ದಾರೆ. ಕಳೆದ 2016ರ ಏಪ್ರಿಲ್‍ನಿಂದ ಮಾರ್ಚ್ 2017ರವರೆಗೆ ಬರೋಬ್ಬರಿ 1 ವರ್ಷ ರೂಂ ಬುಕ್ ಮಾಡಿದ್ದರು. ಇದಕ್ಕಾಗಿ ಇವರು ಹೋಟೆಲ್​ಗೆ 26.22 ಲಕ್ಷ ಹಣ ಪಾವತಿಸಬೇಕಿತ್ತು. ಅದರಲ್ಲಿ ಕೇವಲ  22.83 ಲಕ್ಷ ಪಾವತಿಸಲಾಗಿದ್ದು, 3.53 ಬಾಕಿ ಇತ್ತು. ಈ ಸಂಬಂಧ ಹೋಟೆಲ್ ನವರು ಪೂಜಾ ಹಾಗೂ ಅನಿಲ್​ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇಬ್ಬರೂ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. 
ಇದರಿಂದಾಗಿ ಮಾರ್ಚ್​ 11ರಂದು ಹೋಟೆಲ್ ನವರು ಹೈಗೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ಅನಿಲ್​ ಹಾಗೂ ಪೂಜಾ ವಿರುದ್ಧ ದೂರು ದಾಖಲಿಸಿದ್ದಾರೆ. ​ ಅನಿಲ್​ ಪಿ. ಮೆಣಸಿನಕಾಯಿ ಹೋಟೆಲ್​ನವರಿಗೆ ನೀಡಿದ್ದ ಚೆಕ್​ ಸಹ ಬೌನ್ಸ್​ ಆಗಿದ್ದು, ಅಲ್ಲಿ ಪೂಜಾ ಅವರು ನೀಡಿದ್ದ ವಿಳಾಸ ಸಹ ಸುಳ್ಳು ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com