'ಬೆಲ್ ಬಾಟಂ' ತೆಲುಗು, ಹಿಂದಿ ರಿಮೇಕ್ ಹಕ್ಕು ಮಾರಾಟ

ರಿಷಭ್ ಶೆಟ್ಟಿ ಹಾಗೂ ಹರಿಪ್ರಿಯ ಅಭಿನಯದ ಯಶಸ್ವಿ ಬೆಲ್ ಬಾಟಂಚಿತ್ರದ ತೆಲುಗು ಹಿಂದಿ ರಿಮೇಕ್ ಹಕ್ಕು ಮಾರಾಟವಾಗುತ್ತಿದೆ. ಟಿ. ಕೆ. ದಯಾನಂದ್ ಕಥೆ ಬರೆದು ಜಯತೀರ್ಥ ನಿರ್ದೇಶನದ ಬೆಲ್ ಬಾಟಮ್ ಚಿತ್ರ ಯಶಸ್ವಿ 50 ನೇ ದಿನದತ್ತ ಮುನ್ನುಗುತ್ತಿದೆ.
ಚಿತ್ರದ ಪೋಸ್ಟರ್
ಚಿತ್ರದ ಪೋಸ್ಟರ್

ಬೆಂಗಳೂರು: ರಿಷಭ್ ಶೆಟ್ಟಿ ಹಾಗೂ ಹರಿಪ್ರಿಯ ಅಭಿನಯದ ಯಶಸ್ವಿ ಬೆಲ್ ಬಾಟಂಚಿತ್ರದ ತೆಲುಗು  ಹಿಂದಿ ರಿಮೇಕ್ ಹಕ್ಕು ಮಾರಾಟವಾಗುತ್ತಿದೆ. ಟಿ. ಕೆ. ದಯಾನಂದ್ ಕಥೆ ಬರೆದು ಜಯತೀರ್ಥ ನಿರ್ದೇಶನದ ಬೆಲ್ ಬಾಟಮ್ ಚಿತ್ರ  ಯಶಸ್ವಿ 50 ನೇ ದಿನದತ್ತ ಮುನ್ನುಗುತ್ತಿದೆ.

ಉತ್ತಮ ಮೊತ್ತಕ್ಕೆ ಕೆಎನ್ ಎಂಟರ್ ಪ್ರೈಸಸ್ ಈ ಚಿತ್ರದ ಹಕ್ಕನ್ನು ಖರೀದಿಸುತ್ತಿದ್ದು,ತೆಲಗು ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ಮೂಡಿಬರಲಿದೆ.1980ರ ದಶಕದ ಕಾನ್ಸ್ ಟೇಬಲ್ ಡಿಟೆಕ್ಟೀವ್ ದಿವಾಕರ್ ಪಾತ್ರದ ಸುತ್ತ ಕಥೆ ಸಾಗುತ್ತದೆ.

ಬೆಲ್  ಬಾಟಮ್  ಪೋಸ್ಟರ್, ಟ್ರೈಲರ್ಸ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಂಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಆಡಿಯೋ ಮತ್ತು ಟ್ರೈಲರ್ ನ್ನು ಒಂದೇ ಬಾರಿಗೆ ಬಿಡುಗಡೆಗೊಳಿಸಲಾಗಿತ್ತು.

ಕಾಮಿಡಿ ಥ್ರಿಲರ್ ಕಥಾ ಹಂದರವನ್ನು ಹೊಂದಿರುವ ಈ ಚಿತ್ರದ ತೆಲುಗು ಹಾಗೂ ಹಿಂದಿ ಆವೃತ್ತಿಯಲ್ಲಿ ಯಾರು ಅಭಿನಯಿಸುತ್ತಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com