ಕುಮಾರ್ ಗೌರವ್
ಸಿನಿಮಾ ಸುದ್ದಿ
ಚಿತ್ರನಟಿ ಮಾಡುವ ಆಸೆ ತೋರಿಸಿ ಅತ್ಯಾಚಾರ: ನಿರ್ಮಾಪಕನ ಬಂಧನ
ಚಿತ್ರದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಹೇಳಿ ಸುಮಾರು 2 ವರ್ಷಗಳ ಕಾಲ ಯುವತಿಯೋರ್ವಳನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ ಸ್ಯಾಂಡಲ್ವುಡ್ ನಿರ್ಮಾಪಕನೊರ್ವನನ್ನು...
ಬೆಂಗಳೂರು: ಚಿತ್ರದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಹೇಳಿ ಸುಮಾರು 2 ವರ್ಷಗಳ ಕಾಲ ಯುವತಿಯೋರ್ವಳನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ ಸ್ಯಾಂಡಲ್ವುಡ್ ನಿರ್ಮಾಪಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಮೂಲದ ಯುವತಿಯೋರ್ವಳನ್ನು ಕರೆತಂದು ಸತತ ಎರಡು ವರ್ಷಗಳ ಕಾಲ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಈ ಸಂಬಂಧ ಯುವತಿ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಹ್ಯಾಕ್ ಚಿತ್ರದ ನಿರ್ಮಾಪಕ ಕುಮಾರ್ ಗೌರವ್ ನನ್ನು ಬಂಧಿಸಿದ್ದಾರೆ.
ನಿರ್ಮಾಪಕನನ್ನು ಬಂಧಿಸಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ