ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು, ಶುಕ್ರವಾರ ಕಾಲಿನ ಶಸ್ತ್ರಚಿಕಿತ್ಸೆ

ನಟ-ರಾಜಕಾರಣಿ ಮತ್ತು ಮಕ್ಕಳ್ ನೀಧಿ ಮೈಯಮ್ (ಎಂಎನ್‌ಎಂ) ಸ್ಥಾಪಕ ಕಮಲ್ ಹಾಸನ್ ಅವರು ಶುಕ್ರವಾರ ಆಸ್ಪತ್ರೆಗೆ ದಾಖಲಾಗಲಿದ್ದು, ಬಲಗಾಲಿನ ಕಸಿ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ 
ಕಮಲ್ ಹಾಸನ್
ಕಮಲ್ ಹಾಸನ್
Updated on

ಚೆನ್ನೈ, ನಟ-ರಾಜಕಾರಣಿ ಮತ್ತು ಮಕ್ಕಳ್ ನೀಧಿ ಮೈಯಮ್ (ಎಂಎನ್‌ಎಂ) ಸ್ಥಾಪಕ ಕಮಲ್ ಹಾಸನ್ ಅವರು ಶುಕ್ರವಾರ ಆಸ್ಪತ್ರೆಗೆ ದಾಖಲಾಗಲಿದ್ದು, ಬಲಗಾಲಿನ ಕಸಿ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ

ಜುಲೈ 2016ರಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಅವರ ಬಲಗಾಲಿನ ಮೂಳೆ ಮುರಿದಿದ್ದ ಸಂದರ್ಭದಲ್ಲಿ ಕಸಿ ಹಾಕಲಾಗಿತ್ತು. ಇದರಿಂದ ಗಾಯವಾಗಿತ್ತು. ನ. ೨೨ರಂದು ಶುಕ್ರವಾರ ಶಸ್ತ್ರಚಿಕಿತ್ಸೆ ನಡೆಸಿ ಈ ಕಸಿ ತೆಗೆಯಲಾಗುವುದು ಎಂದು ಎಂಎನ್‌ಎಂ ಉಪಾಧ್ಯಕ್ಷ ಡಾ. ಆರ್ ಮಹೇಂದ್ರನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ರಾಜಕೀಯ ಮತ್ತು ಚಲನಚಿತ್ರಗಳಲ್ಲಿ ಕಾರ್ಯಬಾಹುಳ್ಯದ ಕಾರಣ, ಕಸಿ ತೆಗೆಯುವ ಚಿಕಿತ್ಸೆಯನ್ನು ಮುಂದೂಡಲಾಗಿತ್ತು. ಆದರೆ ಇದೀಗ ಅವರ ವೈದ್ಯರ ಸಲಹೆಯ ಮೇರೆಗೆ ಕಮಲ್ ಹಾಸನ್ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com