ಸಣ್ಣ ಬ್ರೇಕ್ ಬಳಿಕ ಮತ್ತೆ 'ಪೊಗರು' ಕೆಲಸದಲ್ಲಿ ಧ್ರುವ ಸರ್ಜಾ

ಮದುವೆ ಆಗಿ ಇನ್ನೂ ಒಂದು ವಾರ ಕಳೆದಿಲ್ಲ, ಆಗಲೇ ಆಕ್ಷನ್ ಪ್ರಿನ್ಸ್  ಧ್ರುವ ಸರ್ಜಾ, ಪೊಗರು ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಧ್ರುವ ಸರ್ಜಾ
ಧ್ರುವ ಸರ್ಜಾ
Updated on: 

ಬೆಂಗಳೂರು: ಮದುವೆ ಆಗಿ ಇನ್ನೂ ಒಂದು ವಾರ ಕಳೆದಿಲ್ಲ, ಆಗಲೇ ಆಕ್ಷನ್ ಪ್ರಿನ್ಸ್  ಧ್ರುವ ಸರ್ಜಾ, ಪೊಗರು ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ನಂದಾ ಕಿಶೋರ್ ನಿರ್ದೇಶನದ ಈ ಚಿತ್ರದ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಶುಕ್ರವಾರದಿಂದ ಡಬ್ಬಿಂಗ್ ಕಾರ್ಯ ಆರಂಭಿಸುವ ಸಾಧ್ಯತೆ ಇದೆ. ಡಿಸೆಂಬರ್ 5ರಿಂದ ಹಾಡಿನ ಭಾಗದ ಚಿತ್ರೀಕರಣಕ್ಕೆ ಚಿತ್ರ ತಂಡ ಚಿಂತನೆ ನಡೆಸಿದೆ. 

ಈ ಸಿನಿಮಾ ನಾಲ್ಕು ಹಾಡುಗಳನ್ನೊಳಗೊಂಡಿದ್ದು, ಡಿಸೆಂಬರ್ ತಿಂಗಳಿನಲ್ಲಿ ಇಡೀ ಚಿತ್ರೀಕರಣ ಮುಕ್ತಾಯಗೊಳ್ಳಲಿದೆ. ಇದು ಧ್ರುವ ಸರ್ಜಾ ಅವರ ನಾಲ್ಕನೇ ಸಿನಿಮಾವಾಗಿದೆ. ಅದ್ದೂರಿ, ಬಹದ್ದೂರ್, ಭಂಜರಂಗಿ ಹ್ಯಾಟ್ರಿಕ್ ಹಿಟ್  ಬಳಿಕ ಬರುತ್ತಿರುವ  ಪೊಗರು ಚಿತ್ರದ ಮೇಲೂ ಆರಂಭದಿಂದಲೂ ನಿರೀಕ್ಷೆ ಹೆಚ್ಚಾಗಿದೆ. 

ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾದ ಈ ಚಿತ್ರದ ಡೈಲಾಂಗ್ ಟ್ರೈಲರ್ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದುಕೊಂಡಿತ್ತು. ಪೊಗರು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾದರೆ ಧನಂಜನ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಮಯೂರಿ, ರವಿಶಂಕರ್, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತಿತರರು ನಟಿಸಿದ್ದಾರೆ.

ಬಿಕೆ ಗಂಗಾಧರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು,  ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಗಳಾದ ಕೈ ಗ್ರೇನಿ, ಮೊರ್ಗಾನ್ ಅಸ್ತೆ, ಜೊಹಾನ್ ಲ್ಯೂಕಾಸ್ ಮತ್ತು ಜೊ ಲಿಂಡರ್ ಅವರು ಕ್ಲೈಮ್ಯಾಕ್ಸ್ ಹಂತದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೂಡಾ ಈ ಚಿತ್ರದ ಮತ್ತೊಂದು ಹೈಲೈಟ್ ಆಗಿದೆ. ವಿಜಯ್ ಮಿಲ್ಟನ್ ಅವರ ಛಾಯಾಗ್ರಹಣವಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com