ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ನನಗೊಂದು ಪಾತ್ರ ಇರಲೇಬೇಕು: ರಿಷಬ್ ಶೆಟ್ಟಿ

ರಕ್ಷಿತ್ ಶೆಟ್ಟಿಯ ಎಲ್ಲ ಚಿತ್ರಗಳಲ್ಲೂ ನನಗೊಂದು ಪಾತ್ರ ಇರಲೇಬೇಕು ಎಂದು ಖ್ಯಾತ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಕ್ಷಿತ್ ಶೆಟ್ಟಿಯ ಎಲ್ಲ ಚಿತ್ರಗಳಲ್ಲೂ ನನಗೊಂದು ಪಾತ್ರ ಇರಲೇಬೇಕು ಎಂದು ಖ್ಯಾತ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.

ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದ ಹಿನ್ನಯಲ್ಲಿ ಮಾತನಾಡಿದ ಅವರು, ರಕ್ಷಿತ್ ಶೆಟ್ಟಿಯ ಎಲ್ಲ ಚಿತ್ರಗಳಲ್ಲೂ ತಮಗೊಂದು ಪಾತ್ರ ಇರಲೇಬೇಕು ಎಂದರು. ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ನನಗೂ ಒಂದು ಪಾತ್ರ ಬೇಕೆಂದು ಕೇಳಿದ್ದೆ. ರಕ್ಷಿತ್ ಶೆಟ್ಟಿ ಭೇಟಿಯಾದಾಗಲೆಲ್ಲ ಚಿತ್ರೀಕರಣದ ಪ್ರಗತಿಯ ಬಗ್ಗೆ ತಿಳಿಸುತ್ತಿದ್ದರು. ಈ ಸಂದರ್ಭದಲ್ಲಿ ನನ್ನ ಪಾತ್ರದ ಬಗ್ಗೆಯೂ ಹೇಳುತ್ತಾರೇನೋ ಎಂದು ಕಾತರದಿಂದ ಕಾಯುತ್ತಿದ್ದೆ. ಕೊನೆಗೂ ನನ್ನ ಪಾತ್ರದ ಬಗ್ಗೆ ಗೊತ್ತಾಯಿತು. ಇನ್ನು ಮುಂದೆಯೂ ಅಷ್ಟೆ ಅವರ ಎಲ್ಲ ಚಿತ್ರಗಳಲ್ಲೂ ನನಗೊಂದು ಪಾತ್ರ ಇರಲೇಬೇಕು ಎಂಬ ಪ್ರೀತಿಪೂರ್ವಕ ಒತ್ತಾಯವನ್ನು ರಿಷಬ್ ಶೆಟ್ಟಿ ಗೆಳೆಯನ ಮೇಲೆ ಹೇರಿದರು. 

ಇದೇ ವೇಳೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡ, ರಕ್ಷಿತ್ ಶೆಟ್ಟಿಯವರ ಮುಂದಿನ ಎಲ್ಲ ಚಿತ್ರಗಳಿಗೂ ನಾನೇ ನಿರ್ಮಾಪಕ’ ಎಂದರು. 

ಇನ್ನು ಬಹದಿನಗಳಿಂದ ನಿರೀಕ್ಷಿಸುತ್ತಿದ್ದ ’ಅವನೇ ಶ್ರೀಮನ್ನಾರಾಯಣ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೂ ಸಿದ್ಧತೆ ನಡೆಸಿರುವ ಚಿತ್ರತಂಡ ಸಖತ್ ಖುಷಿಯಾಗಿದೆ. ಪ್ಯಾನ್‌ಇಂಡಿಯಾ ಚಿತ್ರಕ್ಕೆ ಕೋಟಿಗಟ್ಟಲೆ ಬಂಡವಾಳ ಹೂಡಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಪ್ರಕಾಶ್ ಎಚ್ ಕೆ ’ಅವನೇ ಶ್ರೀಮನ್ನಾರಾಯಣ’ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಯ ಚಿತ್ರಗಳಿಗೆ ಸ್ವತಃ ರಕ್ಷಿತ್ ಶೆಟ್ಟಿ ಡಬ್ ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com