ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮ್ಯಾನೇಜರ್ ಶ್ರೀನಿವಾಸ್ ರನ್ನು ಕೆಲಸದಿಂದ ವಜಾ ಮಾಡಿರುವ ವಿಚಾರ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಇದೇ ವಿಚಾರವಾಗಿ ಸ್ವತಃ ಮ್ಯಾನೇಜರ್ ಶ್ರೀನಿವಾಸ್ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಈ ಸುದ್ದಿ ವ್ಯಾಪಕ ಸುದ್ದಿಯಾದ ಬೆನ್ನಲ್ಲೇ ಫೇಸ್ ಬುಕ್ ನಲ್ಲಿ ಈ ಕುರಿತಂತೆ ಸ್ಪಷ್ಟನೆ ನೀಡಿರುವ ಶ್ರೀನಿವಾಸ್, 'ದರ್ಶನ್ ಹಾಗೂ ನನ್ನ ನಡುವೆ ಕೆಲಸದ ವಿಷಯವಾಗಿ ಮನಸ್ತಾಪ ಬಂದಿರುವುದು ನಿಜ ಎಂದು ಹೇಳಿದ್ದಾರೆ.
'ದರ್ಶನ್ ತೂಗುದೀಪ ಅಭಿಮಾನಿಗಳು ಮತ್ತು ಎಲ್ಲಾ ಮೀಡಿಯಾ ಸಂಸ್ಥೆಗಳಿಗೂ ನನ್ನ ನಮಸ್ಕಾರಗಳು. ನನಗೂ ಮತ್ತು ದರ್ಶನ್ ತೂಗುದೀಪ ಅವರಿಗೂ ಕೆಲಸದ ವಿಷಯವಾಗಿ ಮನಸ್ತಾಪ ಬಂದಿರೋದು ನಿಜ. ಹೀಗಾಗಿ ನಾನು ಕಳೆದ ಸೆಪ್ಟೆಂಬರ್ 18 ರಿಂದ ದರ್ಶನ್ ಬಳಿ ಕೆಲಸ ಬಿಟ್ಟಿದ್ದೇನೆ. ನನ್ನ ಮೇಲೆ ಯಾರೂ ಸಹ ಇಲ್ಲ ಸಲ್ಲದ ಆರೋಪ ಹೊರಿಸಬೇಡಿ. ನನಗೂ ಕುಟುಂಬ ಇದೆ. ನಾನು ಬೆಂಗಳೂರು ಬಿಟ್ಟು ಎಲ್ಲಿಗೂ ಹೋಗಿಲ್ಲ. ಇಲ್ಲಿಯೇ ಕೆಲಸ ಮಾಡಿಕೊಂಡು ಇದ್ದೇನೆ ಎಂದು ಹೇಳಿದ್ದಾರೆ.
Advertisement