ಕಾಳಿದಾಸ ಕನ್ನಡ ಮೇಸ್ಟ್ರು: ಒಂದು ಹಾಡಿನಲ್ಲಿ ಬರೋಬ್ಬರೀ 21 ಕನ್ನಡ ನಟಿಯರು!

ಸ್ಯಾಂಡಲ್ ವುಡ್ ನಲ್ಲಿ ಬಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ 'ಕಾಳಿದಾಸ ಕನ್ನಡ ಮೇಷ್ಟ್ರು' ಸದ್ಯ ಟ್ರೈಲರ್ ಮೂಲಕ ಸದ್ದು ಮಾಡುತ್ತಿದೆ. ಇಲ್ಲಿ ಕನ್ನಡ ಮೇಷ್ಟ್ರಾಗಿ ನವರಸನಾಯಕ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ. 
ಕಾಳಿದಾಸ ಕನ್ನಡ ಮೇಸ್ಟ್ರು
ಕಾಳಿದಾಸ ಕನ್ನಡ ಮೇಸ್ಟ್ರು
Updated on

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಬಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ 'ಕಾಳಿದಾಸ ಕನ್ನಡ ಮೇಷ್ಟ್ರು' ಸದ್ಯ ಟ್ರೈಲರ್ ಮೂಲಕ ಸದ್ದು ಮಾಡುತ್ತಿದೆ. ಇಲ್ಲಿ ಕನ್ನಡ ಮೇಷ್ಟ್ರಾಗಿ ನವರಸನಾಯಕ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ. 

ಸಿನಿಮಾದಲ್ಲಿ ನಟಿಸಲು ನಾಯಕಿಯರನ್ನು ಕರೆ ತರಲು ನಿರ್ದೇಶಕರು ಪರದಾಡುತ್ತಿದ್ದರೇ , 'ಕಾಳಿದಾಸ ಕನ್ನಡ ಮೇಷ್ಟ್ರು' ನಿರ್ದೇಶಕ ಕವಿರಾಜ್ ಈ ಸಿನಿಮಾದ ಹಾಡೊಂದಕ್ಕೆ ಬರೋಬ್ಬರೀ 21 ಕನ್ನಡ ನಟಿಯರನ್ನು ಕರೆತಂದಿದ್ದಾರೆ.

ನಿರ್ದೇಶಕ ಕವಿರಾಜ್ ಇಂತಹ ಒಂದು ವಿಭಿನ್ನ ಪ್ರಮೋಷನ್ ಪ್ಲಾನ್ ಮಾಡಿದ್ದಾರೆ. ಈ ಹಾಡನ್ನು ಚಿತ್ರದ ಪ್ರಮೋಷನ್ ಗಾಗಿ ಬಳಸುತ್ತಿದ್ದಾರಂತೆ. ಒಂದು ಹಾಡಿನಲ್ಲಿ ಹೆಚ್ಚು ಅಂದರೆ ನಾಲ್ಕರಿಂದ ಐದು ನಾಯಕಿಯರು ಕಾಣಿಸಿಕೊಳ್ಳಬಹುದು ಆದ್ರೆ ಈ ಸಿನಿಮಾದಲ್ಲಿ ಬರೋಬ್ಬರಿ 21 ನಟಿಯರು ಹೆಜ್ಜೆ ಹಾಕಿರುವುದು ವಿಶೇಷ. ರಿಚಿತಾ ರಾಮ್, ಹರಿಪ್ರಿಯಾ, ಅಮೂಲ್ಯ, ಅದಿತಿ ಪ್ರಭುದೇವ, ನಿಶ್ವಿಕಾ ನಾಯ್ಡು, ಕೃಷಿ ತಾಪಂಡ, ರೂಪಿಕ, ಹರ್ಷಿಕಾ ಪೂಣಚ್ಚ, ಕಾರುಣ್ಯ ರಾಮ್, ಸಿಂಧು ಲೋಕನಾಥ್, ಶುಭಾ ಪೂಂಜ, ಸೋನು ಗೌಡ ಸೇರಿದಂತೆ ಅನೇಕ ನಟಿಯರು ಒಂದೇ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಎಲ್ಲಾ ನಟಿಯರು ಕವಿರಾಜ್ ಕರೆಗೆ ಓಗೊಟ್ಟು ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿ ಹೆಜ್ಜೆ ಹಾಕಲು ಸಂತಸದಿಂದ ಒಪ್ಪಿಕೊಂಡಿದ್ದಾರಂತೆ. ಮೊದಲ ಬಾರಿಗೆ ಅನೇಕ ನಟಿಮಣಿಯರು ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದನ್ನು ನೋಡಲು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. 

ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸಧ್ಯದಲೇ ಹಾಡನ್ನು ರಿಲೀಸ್ ಮಾಡಲಿದೆ. ನಟ ಜಗ್ಗೇಶ್ ಗೆ ಸಾಥ್ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದಲ್ಲಿ ಹಾಸ್ಯದ ಜೊತೆಗೆ ಶಿಕ್ಷಣ ವ್ಯವಸ್ಥೆಯ ಬಗ್ಗೆಯು ಹೇಳಲಾಗಿದೆ. 90 ದಶಕದಲ್ಲಿ ಕನ್ನಡ ಮೇಷ್ಟ್ರು ಪರಿಸ್ಥಿತಿ ಹೇಗಿತ್ತು. ಅವರ ತೊಳಲಾಟಗಳೇನು ಎನ್ನುವುದನ್ನು ಈ ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕವಿರಾಜ್. ಜಗ್ಗೇಶ್ ಗೆ ಇಲ್ಲಿ ನಾಯಕಿಯಾಗಿ ಮೇಘನಾ ಗಾಂವ್ಕರ್ ಕಾಣಿಸಿಕೊಂಡಿದ್ದಾರೆ. ಸಿನಿಮಾ  ನವೆಂಬರ್ 15 ರಂದು ರಿಲೀಸ್ ಆಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com