ಪೈಲ್ವಾನ್ 'ಪೈರಸಿ' ಕಿಚ್ಚು: ನಾನು ನನ್ನ ಸ್ನೇಹಿತರು ಕೈಗೆ ಬಳೆ ತೊಟ್ಟಿಲ್ಲ: ತೊಡೆ ತಟ್ಟಿದ ಸುದೀಪ್

ನಾನು ದರ್ಶನ್ ಅವರ ಕಟ್ಟ ಅಭಿಮಾನಿ. ಹೀಗಾಗಿ ನಾನೇ ಪೈಲ್ವಾನ್ ಚಿತ್ರದ ಪೈರಸಿ ಮಾಡಿದ್ದಾಗಿ ರಾಕೇಶ್ ಎಂಬಾತ ಒಪ್ಪಿಕೊಂಡಿದ್ದು ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ಟ್ವೀಟ್ ಮಾಡಿ ನಾನು ನನ್ನ ಸ್ನೇಹಿತರು ಕೈಗೆ ಬಳೆ ತೊಟ್ಟುಕೊಂಡಿಲ್ಲ.
ದರ್ಶನ್-ಕಿಚ್ಚ ಸುದೀಪ್
ದರ್ಶನ್-ಕಿಚ್ಚ ಸುದೀಪ್
Updated on

ಬೆಂಗಳೂರು: ನಾನು ದರ್ಶನ್ ಅವರ ಕಟ್ಟ ಅಭಿಮಾನಿ. ಹೀಗಾಗಿ ನಾನೇ ಪೈಲ್ವಾನ್ ಚಿತ್ರದ ಪೈರಸಿ ಮಾಡಿದ್ದಾಗಿ ರಾಕೇಶ್ ಎಂಬಾತ ಒಪ್ಪಿಕೊಂಡಿದ್ದು ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ಟ್ವೀಟ್ ಮಾಡಿ ನಾನು ನನ್ನ ಸ್ನೇಹಿತರು ಕೈಗೆ ಬಳೆ ತೊಟ್ಟುಕೊಂಡಿಲ್ಲ. ಇದಕ್ಕೆ ತಕ್ಕ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ತನಿಖೆ ವೇಳೆ ಆರೋಪಿ ರಾಕೇಶ್‌, 'ಒಂದು ವರ್ಗದ ಜನರನ್ನು ಮೆಚ್ಚಿಸೋಕೆ ಪೈರಸಿ ಮಾಡಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ದರ್ಶನ್ ಅಭಿಮಾನಿಗಳನ್ನು ಮೆಚ್ಚಿಸುವ ಸಲುವಾಗಿ ಪೈಲ್ವಾನ್‌ ಚಿತ್ರವನ್ನು ಪೈರಸಿ ಮಾಡಿದ್ದಾಗಿ ಆರೋಪಿ ರಾಕೇಶ್ ವಿಚಾರಣೆ ವೇಳೆತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

ಇದರಿಂದ ಕೋಪಗೊಂಡಿರುವ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ,ಇನ್ನು ಕೆಲವು ದಿನಗಳು ಮಾತ್ರ.

ಪೈಲ್ವಾನ್‌ ಸಿನಿಮಾ ಪೈರಸಿ ಆಗಿದೆ ಎಂದು ಚಿತ್ರದ ನಿರ್ಮಾಪಕಿ ಸ್ವಪ್ನಾ ಕೃಷ್ಣ ಅವರು ದೂರು ನೀಡಿದ್ದರು. ದೂರು ದಾಖಲಾಗಿ ಎಫ್​ಐಆರ್ ದಾಖಲಾಗುತ್ತಿದ್ದಂತೆ ಸಿಸಿಬಿಯ ಡಿಸಿಪಿ ರವಿಕುಮಾರ್ ನೇತೃತ್ವದ ತಂಡ ತನಿಖೆ ನಡೆಸಿತ್ತು.  

ತನಿಖೆಯಲ್ಲಿ ಮೊದಲಿಗೆ ಆರೋಪಿ ರಾಕೇಶ್​ ಫೇಸ್‌ ಬುಕ್‌ ಐಡಿಯನ್ನು ಪರಿಶೀಲನೆ ನಡೆಸಲಾಗಿತ್ತು. ಬಳಿಕ ಐಪಿ ಅಡ್ರೆಸ್ ಹಾಗೂ ಆರೋಪಿ ರಾಕೇಶ್ ಮೊಬೈಲ್​ ನಂಬರ್​ ಸಂಗ್ರಹಿಸಲಾಯಿತು. ನಿನ್ನೆ ಇಡೀ ದಿನ ಆರೋಪಿ ರಾಕೇಶ್ ಫೋನ್​ ನಂಬರ್ ಲೊಕೇಶನ್​ ಸರ್ಚ್ ಮಾಡಲಾಗಿತ್ತು. ಕೊನೆಗೆ ದಾಬಸ್​ಪೇಟೆ ಬಳಿ ಲೈವ್ ಲೊಕೇಶನ್ ಪಡೆದಿದ್ದ ಸಿಸಿಬಿ ತಂಡ ಅಲ್ಲಿಯೇ ನಿನ್ನೆ ರಾತ್ರಿ ಆರೋಪಿಯನ್ನು ಬಂಧಿಸಿದ್ದರು. ಪೈಲ್ವಾನ್ ಚಿತ್ರ ಬಿಡುಗಡೆಯಾದ ದಿನವೇ ಸಂಪೂರ್ಣ ಸಿನಿಮಾವನ್ನು ಪೈರಸಿ ಮಾಡಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com