ಲಿಪ್ ಲಾಕ್ ದೃಶ್ಯಗಳ ಮೂಲಕ ಸದ್ದು ಮಾಡಿದ್ದ 'ಎಲ್ಲಿದ್ದೆ ಇಲ್ಲಿತನಕ' ಅಕ್ಟೋಬರ್ 11ರಂದು ತೆರೆಗೆ

ಚಿತ್ರದ ಸ್ಟಿಲ್
ಚಿತ್ರದ ಸ್ಟಿಲ್
Updated on: 

ಬೆಂಗಳೂರು: ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್, ಚಂದನವನದ ಚೆಲುವೆ ಹರಿಪ್ರಿಯಾ ಲಿಪ್ ಲಾಕ್, ಕಿಸ್ಸಿಂಗ್ ದೃಶ್ಯಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪಡ್ಡೆಹುಡುಗರ ಎದೆಬಡಿತ ಹೆಚ್ಚಿಸಿರುವ 'ಎಲ್ಲಿದ್ದೆ ಇಲ್ಲಿತನಕ' ಚಿತ್ರ ಮುಂದಿನ ತಿಂಗಳು ಅಕ್ಟೋಬರ್ 11ರಂದು ತೆರೆಗೆ ಬರಲಿದೆ .

ಲೋಕೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸೃಜನ್ ಲೋಕೇಶ್ ನಿರ್ಮಿಸಿರುವ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ದೊರಕಿದೆ.

ಈ ಚಿತ್ರಕ್ಕೆ ತೇಜಸ್ವಿ ನಿರ್ದೇಶನವಿದ್ದು, ನಾಲ್ಕು ಹಾಡುಗಳಿಗೂ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. 

ಗಣೇಶ್ ಮಲ್ಲಯ್ಯ ಸಂಕಲನ, ಥ್ರಿಲ್ಲರ್ ಮಂಜು, ವಿನೋದ್ ಸಾಹಸ ನಿರ್ದೇಶನ, ಮದನ್ - ಹರಿಣಿ, ಮುರಳಿ, ಕಲೈ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಬೆಂಗಳೂರು, ಕಾಶ್ಮೀರ ಹಾಗೂ ಮಲೇಶಿಯಾದಲ್ಲಿ ಚಿತ್ರೀಕರಣ ನಡೆದಿದೆ. ಸೃಜನ್ ಲೋಕೇಶ್, ಹರಿಪ್ರಿಯಾ. ಗಿರಿಜಾ ಲೋಕೇಶ್, ಸಾಧುಕೋಕಿಲ, ತಾರಾ, ಅವಿನಾಶ್, ತಬಲನಾಣಿ, ಯಶಸ್ ಸೂರ್ಯ, ರಾಧಿಕಾ ರಾವ್, ಗಿರಿ, ಎಂಎಸ್.ಉಮೇಶ್, ಸಿಹಿಕಹಿ ಚಂದ್ರು, ರಂಗ ವಿಶ್ವ ಮುಂತಾದವರು ‘ಎಲ್ಲಿದ್ದೆ ಇಲ್ಲಿ ತನಕ' ಚಿತ್ರದ ತಾರಾಬಳಗದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com