ಭಾರತ ಮಹಿಳಾ ಕ್ರಿಕೆಟ್ ದಂತಕಥೆ 'ಮಿಥಾಲಿ ರಾಜ್' ಆಗಿ ತಾಪ್ಸಿ!

ಭಾರತ ಮಹಿಳಾ ಕ್ರಿಕೆಟ್ ದಂತಕಥೆ 'ಮಿಥಾಲಿ ರಾಜ್' ಅವರ ಜೀವನಾಧಾರಿತ ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟಿ ತಾಪ್ಸಿ ಪನ್ನು ಮಿಥಾಲಿಯಾಗಿ ಕಾಣಿಸಿಕೊಳ್ಳಲ್ಲಿದ್ದಾರೆ.
ಮಿಥಾಲಿ ಮತ್ತು ತಾಪ್ಸಿ
ಮಿಥಾಲಿ ಮತ್ತು ತಾಪ್ಸಿ

ಮುಂಬೈ: ಭಾರತ ಮಹಿಳಾ ಕ್ರಿಕೆಟ್ ದಂತಕಥೆ 'ಮಿಥಾಲಿ ರಾಜ್' ಅವರ ಜೀವನಾಧಾರಿತ ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟಿ ತಾಪ್ಸಿ ಪನ್ನು ಮಿಥಾಲಿಯಾಗಿ ಕಾಣಿಸಿಕೊಳ್ಳಲ್ಲಿದ್ದಾರೆ.

ಧೋನಿ ಚಿತ್ರದ ಬಳಿಕ ಬಾಲಿವುಡ್ ನಲ್ಲಿ ಸಾಲು ಸಾಲು ಬಯೋಪಿಕ್ ಗಳು ಬರುತ್ತಿದ್ದು, ಇದೀಗ ಅದರ ಸಾಲಿಗೆ ಭಾರತ ಮಹಿಳಾ ಕ್ರಿಕೆಟ್ ದಂತಕಥೆ 'ಮಿಥಾಲಿ ರಾಜ್' ಕೂಡ ಸೇರ್ಪಡೆಯಾಗಿದ್ದಾರೆ. ‘ಲೇಡಿ ತೆಂಡೂಲ್ಕರ್‌’ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ವರ್ಷ ಪೂರೈಸಿದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ.

ಶಾಭಾಷ್ ಮಿಥು ಚಿತ್ರದ ಮೂಲಕ ಮಿಥಾಲಿ ರಾಜ್ ತಮ್ಮ ಜೀವನದ ನೈಜ ಘಟನೆಗಳನ್ನು ತೆರೆಯ ಮೇಲೆ ತರುತ್ತಿದ್ದಾರೆ. ಚಿತ್ರದಲ್ಲಿ ಮಿಥಾಲಿ ರಾಜ್ ಪಾತ್ರದಲ್ಲಿ ಖ್ಯಾತ ನಟಿ ತಾಪ್ಸಿ ಪನ್ನು ಅಭಿನಯಿಸುತ್ತಿದ್ದಾರೆ. ತಾಪ್ಸಿ ಈ ಹಿಂದೆ 'ಸಾಂಡ್ ಕೀ ಆಂಖೇ' ಜೀವನಾಧಾರಿತ ಚಿತ್ರದಲ್ಲಿ ನಟಿಸಿದ್ದರು.

ಮಿಥಾಲಿ ರಾಜ್ ಡಿ.3ರಂದು ತಮ್ಮ 37ನೇ ಜನ್ಮದಿನ ಆಚರಿಸಿಕೊಂಡರು. ಇದೇ ದಿನಕ್ಕಾಗಿ ಕಾಯುತ್ತಿದ್ದ ಬಾಲಿವುಡ್ ಬೆಡಗಿ ತಾಪ್ಸಿ ಪನ್ನು ಟ್ವಿಟರ್‌ ಮೂಲಕ ಹೊಸ ವಿಷಯ ಬಹಿರಂಗಪಡಿಸಿದ್ದಾರೆ. 'ಸ್ಕ್ರೀನ್‌ನಲ್ಲಿ ನಿಮ್ಮನ್ನು ಉತ್ತಮ ರೀತಿಯಲ್ಲಿ ಪ್ರದರ್ಶಿಸಲು ನಾನು ಎಲ್ಲಾ ಪ್ರಯತ್ನವನ್ನೂ ಮಾಡುತ್ತೇನೆ. ಅದಕ್ಕಾಗಿ ನಿಮ್ಮಿಂದ ಕವರ್‌ ಡ್ರೈವ್‌ ಕಲಿತುಕೊಳ್ಳಬೇಕು' ಎಂದು ತಾಪ್ಸಿ ಬರೆದಿದ್ದಾರೆ.  ರಾಹುಲ್‌ ದೊಲಾಕಿಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮಿಥಾಲಿ ಬಯೋಪಿಕ್‌ನಲ್ಲಿ ತಾಪ್ಸಿ ಪನ್ನು, ಮಿಥಾಲಿ ಪಾತ್ರಕ್ಕೆ ಜೀವತುಂಬಲಿದ್ದಾರಂತೆ.  ಈ ಬಯೋಪಿಕ್‌ಗೆ ‌‌‌‌‌'ಶಬ್ಬಾಶ್ ಮಿಥು' ಎಂಬ ಹೆಸರು ಇಡಲಾಗಿದ್ದು, ವೈಯಕಾಮ್‌ 18 ಮೋಷನ್‌ ಪಿಕ್ಚರ್‌ ಚಿತ್ರಕ್ಕೆ ಬಂಡವಾಳ ಹೂಡಿದೆ. 

ಮಿಥಾಲಿ ರಾಜ್‌ ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿಯಾಗಿ ಆಗಿ ಒಂದಕ್ಕಿಂತ ಹೆಚ್ಚು ಬಾರಿ ಐಸಿಸಿ ಏಕದಿನ ಪಂದ್ಯ ಆಡಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಈಗಾಗಲೇ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಜೀವನಾಧರಿತ ಸಿನಿಮಾದಲ್ಲಿ ಪರಿಣೀತಿ ಚೋಪ್ರಾ ಬ್ಯುಸಿಯಾಗಿದ್ದು, ಅದರ ಬೆನ್ನಲ್ಲೇ ಭಾರತದ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್‌ ಮಿಥಾಲಿ ದೊರೈ ರಾಜ್‌ ಅವರ ಬಯೋಪಿಕ್‌ ಬಾಲಿವುಡ್‌ನಲ್ಲಿ ಸಿದ್ಧವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com