ಹಿಂದಿಯಲ್ಲಿ 'ಕೆಜಿಎಫ್' ದಾಖಲೆ: ಬಾಹುಬಲಿ, 2.0 ನಂತರ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್!

ಸ್ಯಾಂಡಲ್ವುಡ್ ನಲ್ಲಿ 100 ಕೋಟಿ ಕಲೆಕ್ಷನ್ ಮಾಡಿ ಐತಿಹಾಸಿಕ ದಾಖಲೆ ಬರೆದ ನಂತರ ಇದೀಗ ಕೆಜಿಎಫ್ ಚಿತ್ರ ಬಾಲಿವುಡ್ ನಲ್ಲೂ ಹೊಸ ದಾಖಲೆ ಬರೆದಿದೆ.
ಯಶ್
ಯಶ್
ಸ್ಯಾಂಡಲ್ವುಡ್ ನಲ್ಲಿ 100 ಕೋಟಿ ಕಲೆಕ್ಷನ್ ಮಾಡಿ ಐತಿಹಾಸಿಕ ದಾಖಲೆ ಬರೆದ ನಂತರ ಇದೀಗ ಕೆಜಿಎಫ್ ಚಿತ್ರ ಬಾಲಿವುಡ್ ನಲ್ಲೂ ಹೊಸ ದಾಖಲೆ ಬರೆದಿದೆ. 
ಹೌದು, ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಅದ್ಭುತ ಪ್ರದರ್ಶನ ಕಾಣುತ್ತಿರುವ ಕೆಜಿಎಫ್ ಚಿತ್ರದ ಇದೀಗ ಹಿಂದಿ ಆವೃತಿ ಒಟ್ಟಾರೆ 40 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ. ಕನ್ನಡ ಚಿತ್ರವೊಂದು ಬಾಲಿವುಡ್ ನಲ್ಲಿ ಈ ಪಾಟಿ ಕಲೆಕ್ಷನ್ ಮಾಡುತ್ತಿರುವುದು ಇದೇ ಮೊದಲು. ಇನ್ನು ಬಾಹುಬಲಿ 2, 2.0, ಬಾಹುಬಲಿ ಚಿತ್ರಗಳ ನಂತರ ಬಾಲಿವುಡ್ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ದಕ್ಷಿಣ ಭಾರತದ ನಾಲ್ಕನೇ ಚಿತ್ರ ಎಂಬ ಖ್ಯಾತಿಗೆ ಭಾಜನವಾಗಿದೆ. 
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಇತ್ತೀಚೆಗಷ್ಟೇ 200 ಕೋಟಿ ಕಲೆಕ್ಷನ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಇದೀಗ ಹಿಂದಿ ಭಾಷೆಯಲ್ಲಿ 40.39 ಕೋಟಿ ರುಪಾಯಿ ಗಳಿಕೆ ಮಾಡಿದೆ ಎಂದು ತರುಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com