ಫಾಸ್ಟ್ ಅಂಡ್ ಫ್ಯೂರಿಸ್ 9 ಚಿತ್ರೀಕರಣ ವೇಳೆ ಭೀಕರ ಘಟನೆ, ಕೋಮಾಗೆ ಜಾರಿದ ಸ್ಟಂಟ್ ಮ್ಯಾನ್!
ಫಾಸ್ಟ್ ಅಂಡ್ ಫ್ಯೂರಿಸ್ ಸೀರಿಸ್ ಚಿತ್ರಗಳಲ್ಲಿ ಹಾಲಿವುಡ್ ಸಂಚಲನ ಸೃಷ್ಟಿಸಿದ್ದವು ಇದೀಗ ಇದೇ ಮುಂದುವರೆದ ಭಾಗದ ಚಿತ್ರೀಕರಣ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಟಂಟ್ ಮ್ಯಾನ್...
Published: 25th July 2019 12:00 PM | Last Updated: 25th July 2019 06:56 AM | A+A A-

ಜೋ ವಾಟ್ಸ್-ವಿನ್ ಡೀಸೆಲ್
Source : Online Desk
ಫಾಸ್ಟ್ ಅಂಡ್ ಫ್ಯೂರಿಸ್ ಸೀರಿಸ್ ಚಿತ್ರಗಳಲ್ಲಿ ಹಾಲಿವುಡ್ ಸಂಚಲನ ಸೃಷ್ಟಿಸಿದ್ದವು ಇದೀಗ ಇದೇ ಮುಂದುವರೆದ ಭಾಗದ ಚಿತ್ರೀಕರಣ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಟಂಟ್ ಮ್ಯಾನ್ ಕೋಮಾಗೆ ಜಾರಿದ್ದಾರೆ.
ಫಾಸ್ಟ್ ಅಂಡ್ ಫ್ಯೂರಿಸ್ 9 ಚಿತ್ರದ ಚಿತ್ರೀಕರಣದ ನಟ ವಿನ್ ಡೀಸೆಲ್ ಅವರ ಡೂಪ್ ಜೋ ವಾಟ್ಸ್ ಸಾಹಸ ಚಿತ್ರೀಕರಣದ ವೇಳೆ 30 ಅಡಿಗಳ ಎತ್ತರದಿಂದ ಕೆಳಗೆ ಬಿದ್ದಿದ್ದು ತಲೆಗೆ ಗಂಭೀರ ಗಾಯವಾಗಿದ್ದು ಸದ್ಯ ಕೋಮಾಗೆ ಜಾರಿದ್ದಾರೆ.
ದಕ್ಷಿಣ ಇಂಗ್ಲೆಂಡ್ ನ ಲೀವ್ಸ್ ಡೆನ್ ನಲ್ಲಿರುವ ವಾರ್ನರ್ ಬ್ರದರ್ಸ್ ಸ್ಟುಡಿಯೋಸ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಜೋ ವಾಟ್ಸ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಜೀವಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news