ಟಾಲಿವುಡ್ ಸ್ಟಾರ್ ನಟ ರಾಮ್ ಪೋಥಿನೇನಿಗೆ ದಂಡ ವಿಧಿಸಿದ ಪೊಲೀಸರು!

ಖ್ಯಾತ ತೆಲುಗು ನಟ ರಾಮ್ ಪೋಥಿನೇನಿಗೆ ಹೈದರಾಬಾದ್ ಪೊಲೀಸರು ದಂಡ ವಿಧಿಸಿದ್ದಾರೆ.

Published: 25th June 2019 12:00 PM  |   Last Updated: 25th June 2019 02:51 AM   |  A+A-


Tollywood actor Ram Pothineni was fined of Rs 200 by the police

ಸಂಗ್ರಹ ಚಿತ್ರ

Posted By : SVN SVN
Source : ANI
ಹೈದರಾಬಾದ್: ಖ್ಯಾತ ತೆಲುಗು ನಟ ರಾಮ್ ಪೋಥಿನೇನಿಗೆ ಹೈದರಾಬಾದ್ ಪೊಲೀಸರು ದಂಡ ವಿಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ನಟ ರಾಮ್ ಸಾರ್ವಜನಿಕವಾಗಿ ಸಿಗರೇಟ್ ಸೇದುವ ಮೂಲಕ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ (ಕೊಪ್ಟಾ), 2003ರನ್ನು ಉಲ್ಲಂಘನೆ ಮಾಡಿದ್ದು. ಇದೇ ಕಾರಣಕ್ಕೆ ನಟ ರಾಮ್ ಗೆ ಪೊಲೀಸರು 200 ರೂ ದಂಡ ವಿಧಿಸಿದ್ದಾರೆ ಎಂದು ತಿಳದುಬಂದಿದೆ.

ಪ್ರಸ್ತುತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ ಇಸ್ಮಾರ್ಟ್ ಶಂಕರ್ ಚಿತ್ರದಲ್ಲಿ ನಟಿಸುತ್ತಿರುವ ರಾಮ್, ಇದೇ ಚಿತ್ರದ ಚಿತ್ರೀಕರಣಕ್ಕಾಗಿ ಖ್ಯಾತ ಪ್ರವಾಸಿ ತಾಣ ಹೈದರಾಬಾದ್ ನ ಚಾರ್ ಮಿನಾರ್ ಗೆ ಬಂದಿದ್ದರು. ಈ ವೇಳೆ ಅವರು ಸಾರ್ವಜನಿಕವಾಗಿಯೇ ಸಿಗರೇಟ್ ಸೇದುತ್ತಿದ್ದರು. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿ ಹೈದರಾಬಾದ್ ಪೊಲೀಸರಿಗೆ ಟ್ಯಾಕ್ ಕೂಡ ಮಾಡಿದ್ದರು. ಫೋಟೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸ್ ಇಲಾಖೆ ಇದೀಗ ನಟ ರಾಮ್ ಗೆ 200 ರೂ ದಂಡವಿಧಿಸಿದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp