ಎರಡು ಕಾರಣದಿಂದ ಗುರುನಂದನ್ ಜೊತೆಗೆ ನಟಿಸಲು ಹರಿಪ್ರಿಯಾ ಸಹಿ!

ಸ್ವಲ್ವ ವಿರಾಮದ ನಂತರ ಹರಿಪ್ರಿಯಾ ಮತ್ತೆ ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ಸದ್ಯ ಗುರುನಂದನ್ ಜೊತೆಗೆ ಚಿತ್ರವೊಂದರಲ್ಲಿ ಅಭಿನಯಿಸುತ್ತಿರುವ ಬಗ್ಗೆ ಹರಿಪ್ರಿಯಾ  ಸ್ಪಷ್ಪಪಡಿಸಿದ್ದಾರೆ

Published: 09th September 2019 11:36 AM  |   Last Updated: 09th September 2019 11:36 AM   |  A+A-


Haripriya

ಹರಿಪ್ರಿಯಾ

Posted By : Nagaraja AB
Source : The New Indian Express

ಸ್ವಲ್ವ ವಿರಾಮದ ನಂತರ ಹರಿಪ್ರಿಯಾ ಮತ್ತೆ ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ಸದ್ಯ ಗುರುನಂದನ್ ಜೊತೆಗೆ ಚಿತ್ರವೊಂದರಲ್ಲಿ ಅಭಿನಯಿಸುತ್ತಿರುವ ಬಗ್ಗೆ ಹರಿಪ್ರಿಯಾ  ಸ್ಪಷ್ಪಪಡಿಸಿದ್ದಾರೆ. ಮೂರು ದಿನಗಳ ಕಾಲ ಚಿತ್ರೀಕರಣದಲ್ಲಿ ಅವರು ಪಾಲ್ಗೊಂಡಿದ್ದು, ಕೆಲವೊಂದು ಕಾರಣದಿಂದ ಚಿತ್ರದಲ್ಲಿ ಅಭಿನಯಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

ಜಯಣ್ಣ ಪ್ರೊಢಕ್ಷನ್ ನಲ್ಲಿ ಇದು ನನ್ನ ಎರಡನೇ ಸಿನಿಮಾ, ಬೇಲ್ ಬಾಟಂ ಚಿತ್ರವನ್ನು ಅವರೇ ವಿತರಣೆ ಮಾಡಿದ್ದರು. ನಿರ್ಮಾಪಕ ಜಯಣ್ಣ ಅವರಿಗೆ ತಾರಾ ಮೌಲ್ಯ ಗೊತ್ತಿದೆ. ಎರಡನೇದಾಗಿ ಈ ಚಿತ್ರ  2014ರಲ್ಲಿ ತೆರೆಗೆ ಬಂದ ತಮಿಳಿನ ಪ್ಲಿಕ್ ಕಪಲ್ ಚಿತ್ರದಿಂದ ಪ್ರೇರಣೆ ಪಡೆದಿದೆ. ಇದೊಂದು ರೋಮಾನ್ಸ್, ಹಾಸ್ಯ ಭರಿತ ಚಿತ್ರವಾಗಿದ್ದು, ಹೆಚ್ಚಿನ ಹಾಸ್ಯ ದೃಶ್ಯಗಳಿದ್ದು, ಎಂಜಯ್ ಮಾಡಬಹುದಾಗಿದೆ ಎಂದು ಹರಿಪ್ರಿಯಾ ತಿಳಿಸಿದರು.

ವಿಜಯ್ ಕಿರಣ್ ಈ ಚಿತ್ರದ ಆಪರ್ ನೀಡಿದ್ದಾಗ ಕಥೆ ಹಾಗೂ ಪಾತ್ರದ ಬಗ್ಗೆ ಪರಿಚಯವಿತ್ತು. ಆದರೆ, ಸಂಪೂರ್ಣ ಸಿನಿಮಾವನ್ನು ವೀಕ್ಷಿಸಿದ್ದಾಗ ಒಳ್ಳೇಯ ಸಿನಿಮಾ ಅನಿಸಿತು. ಹೀಗಾಗಿ ಸಿನಿಮಾಕ್ಕೆ ಸಹಿ ಮಾಡಿದ್ದಾಗಿ  ಹರಿಪ್ರಿಯಾ ಹೇಳಿದರು. ಇನ್ನು ಹೆಸರಿಡದ ಚಿತ್ರದಲ್ಲಿ ಸಾಧುಕೋಕಿಲಾ ಹಾಸ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಡ್ಡಿಪುಡಿ ಚಂದ್ರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಹರಿಪ್ರಿಯಾ, ಕನ್ನಡ ಗೊತ್ತಿಲ್ಲ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರವನ್ನು ಮಯೂರ್ ರಾಘವೇಂದ್ರ ನಿರ್ದೇಶಿಸಿದ್ದಾರೆ. ಈ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ನಂತರ ಸೃಜನ್ ಲೋಕೇಶ್ ಜೊತೆಗಿನ ಎಲ್ಲಿದ್ದೆ ಇಲ್ಲಿ ತನಕ ಚಿತ್ರವೂ ಬಿಡುಗಡೆಯಾಗಲಿದೆ. ಈ ಮಧ್ಯೆ ಇನ್ನಿತರ ಸಿನಿಮಾಗಳ ಕಥೆಗಳನ್ನು ಆಲಿಸುವುದರಲ್ಲಿ ಹರಿಪ್ರಿಯಾ ಮುಂದಾಗಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp