ತಪ್ಪು ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಕಿಚ್ಚಾ ಸುದೀಪ್

ತಪ್ಪು ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ನಟ ಕಿಚ್ಚಾ ಸುದೀಪ್ ಪೈರಸಿ ಮಾಜಿ ಸಿಕ್ಕಿಬಿದ್ದವರಿಗೆ ತಿರುಗೇಟು ನೀಡಿದ್ದಾರೆ.

Published: 21st September 2019 12:54 PM  |   Last Updated: 21st September 2019 01:08 PM   |  A+A-


Kichcha Sudeepa

ಸಂಗ್ರಹ ಚಿತ್ರ

Posted By : srinivasamurthy
Source : Online Desk

ಬೆಂಗಳೂರು: ತಪ್ಪು ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ನಟ ಕಿಚ್ಚಾ ಸುದೀಪ್ ಪೈರಸಿ ಮಾಜಿ ಸಿಕ್ಕಿಬಿದ್ದವರಿಗೆ ತಿರುಗೇಟು ನೀಡಿದ್ದಾರೆ.

ನಟ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಪೈರಸಿ ವಿಚಾರ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ನಟ ಸುದೀಪ್ ಕೂಡ ಇದೇ ವಿಚಾರವಾಗಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ತಪ್ಪು ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಪೈಲ್ವಾನ್ ಚಿತ್ರದ ಪೈರಸಿಯಿಂದಾಗಿ ನಿರ್ಮಾಪಕರಿಗೆ ನಷ್ಟವಾದ ಸುದ್ದಿಯನ್ನು ಟ್ಯಾಗ್ ಮಾಡಿರುವ ನಟ ಸುದೀಪ್, 'ಮೇಲೊಬ್ಬ ಇದ್ಹಾನೆ ಅನ್ನೋದು ಒಂದಡೆ .... ನ್ಯಾಯ ಅನ್ನೋದು ಇನ್ನೊಂದೆಡೆ .... 
ತಪ್ಪು ಮಾಡಿಧವು ಈ ಎರಡು ಕಣ್ಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ... ಮಾಧ್ಯಮ,, ಚಿತ್ರರಂಗದಲ್ಲಿರುವ ನನ್ನ ಗೆಳೆಯರು ಹಾಗೂ ನನ್ನ ಎಲ್ಲಾ  ಸ್ನೇಹಿತರು ತಮ್ಮ ದ್ವನಿಯೆತ್ತಿದಕ್ಕೆ,,, ಧನ್ಯವಾದಗಳು. ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಪೈಲ್ವಾನ್ ಚಿತ್ರದ ಪೈರಸಿ ವಿಚಾರಕ್ಕೆ ಸಂಬಂಧಿಸಿದಂತೆ ನೆಲಮಂಗಲದ ದಾಬಸ್ ಪೇಟೆಯಲ್ಲಿ ಸಿಸಿಬಿ ಪೊಲೀಸರು ರಾಕೇಶ್ ವಿರಾಟ್ ಎಂಬ ಯುವಕನನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಬಂಧಿತ ಆರೋಪಿ ತಾನು ಒಂದು ವರ್ಗದ ಜನರನ್ನು ಖುಷಿಪಡಿಸಲು ನಾನು ಕಾರ್ಯ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ.


Stay up to date on all the latest ಸಿನಿಮಾ ಸುದ್ದಿ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp