"ಕೊರೋನಾ ಮುಕ್ತ ಭಾರತ" ಯಾವಾಗ ಘೋಷಿಸುವಿರಿ: ಜನನಾಯಕರಿಗೆ ಉಪೇಂದ್ರ ಪ್ರಶ್ನೆ

ಕೊರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ‌ ಹೆಚ್ಚುತ್ತಿರುವ  ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ  ಉಪೇಂದ್ರ ಅವರು  ಎಲ್ಲ ಜನನಾಯಕರಿಗೆ ನೇರವಾದ ಪ್ರಶ್ನೆಯೊಂದು ಕೇಳಿದ್ದಾರೆ
ಉಪೇಂದ್ರ
ಉಪೇಂದ್ರ
Updated on: 

ಬೆಂಗಳೂರು: ಕೊರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ‌ ಹೆಚ್ಚುತ್ತಿರುವ  ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ  ಉಪೇಂದ್ರ ಅವರು  ಎಲ್ಲ ಜನನಾಯಕರಿಗೆ ನೇರವಾದ ಪ್ರಶ್ನೆಯೊಂದು ಕೇಳಿದ್ದಾರೆ

ತಮ್ಮ  ಟ್ವೀಟ್ ನಲ್ಲಿ ಉಪೇಂದ್ರ ಅವರು, ಕೊರೋನಾ ಮುಕ್ತ ಭಾರತ ಎಂದು ಯಾವಾಗ ಘೋಷಿಸುವಿರಿ(?)  ನೂರಾ ಮೂವತ್ತು ಕೋಟಿ ಜನರನ್ನೂ ತಪಾಸಣೆ ಮಾಡಿದ ನಂತರವೇ(?) ಅಲ್ಲಿಯವರೆಗೂ ಲಾಕ್​ಡೌನ್​   ಮುಂದುವರೆಯುವುದೇ(?) ಅದಕ್ಕೆ ಮುಂಚೆ ಲಾಕ್​ಡೌನ್​ ತೆರವು ಮಾಡಿದರೆ ಪ್ರಜೆಗಳಿಗೆ  ಅಪಾಯವಲ್ಲವೇ(?) ಎಂದು  ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.

ಈಗಾಗಲೇ ಕೊರೋನಾ ಸೋಂಕು‌ ನಿಯಂತ್ರಿಸಲು ದೇಶವ್ಯಾಪಿ  ಏ. 14ರ ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್​ಡೌನ್​ ಮಾಡಿ‌ ಆದೇಶ  ಹೊರಡಿಸಿದ್ದಾರೆ.  ಆದರೆ, ಕೊರೊನಾ ವೈರಸ್​ ಸೋಂಕಿತ ಸಂಖ್ಯೆ ಹೆಚ್ಚುತ್ತಲೇ ಇದೆ  ಹೊರತಾಗಿ ಕಡಿಮೆ ಆಗುತ್ತಿಲ್ಲ. ಇದರಿಂದ ಜನರಲ್ಲಿ ಇನ್ನಷ್ಟು ಆತಂಕ ಮನೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com