3 ವರ್ಷಗಳ ನಂತರ ತಮ್ಮನ್ನು ನೆನೆದ ರಶ್ಮಿಕಾಗೆ ನಟ ರಕ್ಷಿತ್ ಶೆಟ್ಟಿ ಶುಭ ಹಾರೈಕೆ!

ನಿಶ್ಚಿತಾರ್ಥವಾಗಿ ಬ್ರೇಕಪ್ ಆದ 3 ವರ್ಷಗಳ ಬಳಿಕ ಇದೀಗ ನಟಿ ರಶ್ಮಿಕಾ ಮಂದಣ್ಣ ಅವರು ನಟ ರಕ್ಷಿತ್ ಶೆಟ್ಟಿಯವರನ್ನು ನೆನಪು ಮಾಡಿಕೊಂಡಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ನಿಶ್ಚಿತಾರ್ಥವಾಗಿ ಬ್ರೇಕಪ್ ಆದ 3 ವರ್ಷಗಳ ಬಳಿಕ ಇದೀಗ ನಟಿ ರಶ್ಮಿಕಾ ಮಂದಣ್ಣ ಅವರು ನಟ ರಕ್ಷಿತ್ ಶೆಟ್ಟಿಯವರನ್ನು ನೆನಪು ಮಾಡಿಕೊಂಡಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. 

ಕಿರಿಕ್​ ಪಾರ್ಟಿ ಸಿನಿಮಾದ ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಡು ಯುಟ್ಯೂಬ್​ನಲ್ಲಿ ಬರೋಬ್ಬರಿ 10 ಕೋಟಿ ವೀಕ್ಷಕರನ್ನು ಗಳಿಸಿಕೊಂಡಿದೆ. 2016ರ ನವೆಂಬರ್​ 25 ರಂದು ಯೂಟ್ಯೂಬ್​ನಲ್ಲಿ ಬಿಡುಗಡೆಗೊಂಡಿದ್ದ ಈ ಹಾಡು ಇದೀಗ 10 ಕೋಟಿ ವೀಕ್ಷಣೆ ಗಳಿಸಿರುವ ಕಾರಣ ‘ಕಿರಿಕ್’​ ತಂಡ ಫುಲ್​ ಖುಷಿಯಾಗಿದೆ. ಟ್ವಿಟರ್​, ಫೇಸ್​ಬುಕ್​ ಮುಂತಾದ ಕಡೆ ‘10 ಕೋಟಿ’ಯ ಖುಷಿಯನ್ನು ಚಿತ್ರತಂಡ ಹಂಚಿಕೊಂಡಿದೆ.

ಕಿರಿಕ್​ ಪಾರ್ಟಿ ಸಿನಿಮಾ ಮೂಲಕ ಮೋಡಿ ಮಾಡಿದ್ದ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಸಿನಿಮಾ ಬಿಡುಗಡೆಯಾದಾಗ ಭಾರೀ ಸುದ್ದಿಯಲ್ಲಿದ್ದರು. ಆದರೆ, ನಂತರದ ದಿನಗಳಲ್ಲಿ ಅವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಅಭಿಪ್ರಾಯ ಮೂಡಿದ ಕಾರಣ ಜೋಡಿಯ ಕುರಿತಾದ ಸುದ್ದಿ ತಣ್ಣಗಾಗಿತ್ತು. ಟ್ವಿಟರ್​, ಇನ್​ಸ್ಟಾಗ್ರಾಂಗಳಲ್ಲೂ ಇವರಿಬ್ಬರೂ ಸಂಪರ್ಕದಲ್ಲಿರುವುದು ಕಂಡುಬಂದಿರಲಿಲ್ಲ.

ಆದರೆ, ಇದೀಗ ‘ಬೆಳಗೆದ್ದು ಯಾರ ಮುಖವ ನಾನು ನೋಡಿದೆ’ ಹಾಡು 10 ಕೋಟಿ ವೀಕ್ಷಣೆ ಪಡೆಯುತ್ತಿದ್ದಂತೆ ರಶ್ಮಿಕಾ ತಮ್ಮು ಖುಷಿಯನ್ನು ಹಂಚಿಕೊಂಡಿದ್ದಾರೆ. 

ತಮ್ಮ ಮೊಟ್ಟ ಮೊದಲ ಹಾಡು ಈ ಸಾಧನೆ ಮಾಡಿರುವುದು ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ ಎಂದು ಹೇಳಿರುವ ರಶ್ಮೀಕಾ ಅವರು ಚಿತ್ರೀಕರಣದ ಸಂದರ್ಭವನ್ನು ಮತ್ತೆ ನೆನಪಿಸಿಕೊಂಡು ನನ್ನೊಳಗಿನ ಸಾನ್ವಿಯನ್ನು ನಾನು ಕಂಡುಕೊಳ್ಳುತ್ತಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಅಚ್ಚರಿಯೆಂಬಂತೆ ಈ ಟ್ವೀಟ್​ನ ಕೊನೆಯಲ್ಲಿ ರಶ್ಮಿಕಾ ಅವರು, ರಕ್ಷಿತ್​ ಶೆಟ್ಟಿಯನ್ನು ಟ್ಯಾಗ್​ ಮಾಡಿದ್ದಾರೆ. ರಿಷಬ್​ ಶೆಟ್ಟಿ, ಅಜನೀಶ್​ ಬಿ ಲೋಕನಾಥ್​, ಸಂಯುಕ್ತ ಹೆಗಡೆ ಜೊತೆ ರಕ್ಷಿತ್​ ಶೆಟ್ಟಿಯನ್ನೂ ಟ್ಯಾಗ್ ಮಾಡಿರುವುದು ಕುತೂಹಲ ಮೂಡಿಸಿದೆ.

ಬರೋಬ್ಬರಿ 3 ವರ್ಷಗಳ ಬಳಿಕ ರಶ್ಮಿಕಾ ಅವರು ತಮ್ಮ ಗೆಳೆಯ ರಕ್ಷಿತ್ ಅವರನ್ನು ನೆನಪು ಮಾಡಿಕೊಂಡಿದ್ದು, ಇದಕ್ಕೆ ರಕ್ಷಿತ್ ಶೆಟ್ಟಿ ಕೂಡ ಪ್ರತಿಕ್ರಿಯೆ ನೀಡಿ ಮತ್ತಷ್ಟು ಉತ್ತುಂಗಕ್ಕೇರು... ನಿನ್ನ ಕನಸುಗಳೆಲ್ಲಾ ನನಸಾಗಲಿ ಎಂದು ಶುಭ ಹಾರೈಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com