'ಕೆಜಿಎಫ್: ಚಾಪ್ಟರ್ 2' ಗಾಗಿ ಡೆತ್ ವಾರಂಟ್ ಜಾರಿಗೆ ಆಗಮಿಸಿದ ರವೀನಾ ಟಂಡನ್!

ಬಾಲಿವುಡ್ ನಟಿ ರವೀನಾ ಟಂಡನ್  "ಕೆಜಿಎಫ್: ಚಾಪ್ಟರ್  2" ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಆಕ್ಷನ್ ಡ್ರಾಮಾ "ಕೆಜಿಎಫ್" ನ  ಎರಡನೇ ಭಾಗ ಇದೀಗ ಚಿತ್ರೀಕರಣದಲ್ಲಿದ್ದು ನಿರ್ದೇಶಕ ಪ್ರಶಾಂತ್ ನೀಲ್ ಟ್ವಿಟ್ಟರ್ ನಲ್ಲಿ ರವೀನಾ ಅವರ ಆಗಮನವನ್ನು ಖಾತ್ರಿಪಡಿಸಿದ್ದಾರೆ. 
ರವೀನಾ ಟಂಡನ್
ರವೀನಾ ಟಂಡನ್
Updated on: 

ಬಾಲಿವುಡ್ ನಟಿ ರವೀನಾ ಟಂಡನ್  "ಕೆಜಿಎಫ್: ಚಾಪ್ಟರ್  2" ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಆಕ್ಷನ್ ಡ್ರಾಮಾ "ಕೆಜಿಎಫ್" ನ  ಎರಡನೇ ಭಾಗ ಇದೀಗ ಚಿತ್ರೀಕರಣದಲ್ಲಿದ್ದು ನಿರ್ದೇಶಕ ಪ್ರಶಾಂತ್ ನೀಲ್ ಟ್ವಿಟ್ಟರ್ ನಲ್ಲಿ ರವೀನಾ ಅವರ ಆಗಮನವನ್ನು ಖಾತ್ರಿಪಡಿಸಿದ್ದಾರೆ.

"ಡೆತ್ ವಾರಂಟ್ ಹೊರಡಿಸುವ ಮಹಿಳೆ ಬಂದಿದ್ದಾರೆ !!! ನಿಮಗೆ ಆತ್ಮೀಯ ಸ್ವಾಗತ, ರವೀನಾ ಟಂಡನ್ ಮ್ಯಾಮ್  # ಕೆಜಿಎಫ್‌ ಚಾಪ್ಟರ್  2, " ಎಂಬುದಾಗಿ ಪ್ರಶಾಂತ್ ಟ್ವೀಟ್ ಮಾಡಿದ್ದಾರೆ.

ಪ್ರಶಾಂತ್ ಅವರ ಟ್ವೀಟ್ ಪ್ರಕಾರ, ರವೀನಾ ಈ ಚಿತ್ರದಲ್ಲಿ  ರಮಿಕಾ ಸೇನ್ ಪಾತ್ರವನ್ನು ಮಾಡಲಿದ್ದಾರೆ.ಇನ್ನು ಬಾಲಿವುಡ್ ನಟ  ನಟ ಸಂಜಯ್ ದತ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅವರು ಅಧೀರನ ಪಾತ್ರಧಾರಿಯಾಗಿದ್ದಾರೆ.

ಹೊಂಬಾಳೆ ಲೆ ಫಿಲ್ಮ್ಸ್ ನಿರ್ಮಿಸಿದ "ಕೆಜಿಎಫ್: ಚಾಪ್ಟರ್ 2" ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆ ಕಾಣಲಿದೆ.ಈ ಚಿತ್ರವು ಕನ್ನಡದ ಬ್ಲ್ಯಾಕ್ ಬಸ್ಟರ್ "ಕೆಜಿಎಫ್: ಚಾಪ್ಟರ್  1" ನ ಫಾಲೋ-ಅಪ್ ಆಗಿದೆ, ಇದರಲ್ಲಿ ಕನ್ನಡದ ಸ್ಟಾರ್ ನಟ ಯಶ್ತಮನ್ನಾ ಭಾಟಿಯಾ ಮತ್ತು ಅನಂತ್ ನಾಗ್ ಅಭಿನಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com