ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಚಂದನ್ ಶೆಟ್ಟಿ-ನಿವೇದಿತಾ ಗೌಡ

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಂದು (ಬುಧವರ) ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಚಂದನ್-ನಿವೇದಿತಾ ಮದುವೆ
ಚಂದನ್-ನಿವೇದಿತಾ ಮದುವೆ
Updated on: 

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಂದು (ಬುಧವರ) ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಮೈಸೂರಿನ ಹಿನಕಲ್‌ ಸ್ಪೆಕ್ಟ್ರಾ ಕಲ್ಯಾಣ ಮಂಟಪದಲ್ಲಿ ಚಂದನ್-ನಿವೇದಿತಾ ಅವರ ವಿವಾಹ ಅದ್ದೂರಿಯಾಗಿ ನೆರವೇರಿದೆ. ಬೆಳಿಗ್ಗೆ 8.15 ರಿಂದ 9 ಗಂಟೆ ರವರೆಗಿನ ಮೀನ ಲಗ್ನದಲ್ಲಿ ಚಂದನ್ ಶೆಟ್ಟಿ ನಿವೇದಿತಾಗೆ ಮಾಂಗಲ್ಯಧಾರಣೆ ಮಾಡಿದ್ದಾರೆ.

ನಿವೇದಿತಾ ಪೋಷಕರಾದ ಹೇಮ ಮತ್ತು ರಮೇಶ್, ಚಂದನ್‍ಶೆಟ್ಟಿ ಪೋಷಕರಾದ ಪ್ರೇಮಲತಾ ಹಾಗೂ ಪರಮೇಶ್ ಹಾಗೂ ಮದುವೆಗೆ ಆಗಮಿಸಿದ್ದ ಬಂಧು ಮಿತ್ರರು, ಸ್ನೇಹಿತರು ನವದಂಪತಿಗಳಿಗೆ ಹರಸಿ ಆಶೀರ್ವದಿಸಿದ್ದಾರೆ.

ನಿನ್ನೆ (ಮಂಗಳವಾರ) ಸಂಜೆ ಚಂದನ್-ನಿವೇದಿತಾ ಆರತಕ್ಷತೆ ಕಾರ್ಯಕ್ರಮ ನೆರವೇರಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com