'ನಾನು ಮತ್ತು ಗುಂಡ' ಚಿತ್ರಕ್ಕೆ ಡಬ್ ಮಾಡಿದ ಸಿಂಬಾ ಶ್ವಾನ

ಶಿವರಾಜ್ ಕೆಆರ್ ಪೇಟೆ ಹಾಗೂ ಸಂಯುಕ್ತ ಹೆಗ್ಡೆ ನಾಯಕ ನಟಿಯಾಗಿ ಅಭಿನಯಿಸುತ್ತಿರುವ ಈ ಸಿನಿಮಾದಲ್ಲಿ ಗುಂಡ ಮತ್ತು ಸಿಂಬಾ ಎಂಬ ಎರಡು ಶ್ವಾನಗಳು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿವೆ.
ನಾನು ಮತ್ತು ಗುಂಡ ಚಿತ್ರದ ಸ್ಟಿಲ್
ನಾನು ಮತ್ತು ಗುಂಡ ಚಿತ್ರದ ಸ್ಟಿಲ್
Updated on

ಬೆಂಗಳೂರು: ಹಾಲಿವುಡ್ ಹಾಗೂ ಬಾಲಿವುಡ್  ಸಿನಿಮಾಗಳಿಗೆ ಪ್ರಾಣಿಗಳಿಗೆ ಖ್ಯಾತ ನಟ ನಟಿಯರು ಧ್ವನಿ ನೀಡುವುದು ಸಾಮಾನ್ಯ. ಆದರೆ, ನಾನು ಮತ್ತು ಗುಂಡ ಚಿತ್ರತಂಡ ಇದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುದಿದೆ. ಶಿವರಾಜ್ ಕೆಆರ್ ಪೇಟೆ ಹಾಗೂ ಸಂಯುಕ್ತ ಹೆಗ್ಡೆ ನಾಯಕ ನಟಿಯಾಗಿ ಅಭಿನಯಿಸುತ್ತಿರುವ ಈ ಸಿನಿಮಾದಲ್ಲಿ ಗುಂಡ ಮತ್ತು ಸಿಂಬಾ ಎಂಬ ಎರಡು ಶ್ವಾನಗಳು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿವೆ.

ಈ ಎರಡು ಶ್ವಾನಗಳು ತಾವು ನಟಿಸಿರುವ ಪಾತ್ರಕ್ಕೆ ತಮ್ಮದೇ ಧ್ವನಿಯನ್ನು ಈ ಚಿತ್ರದಲ್ಲಿ ನೀಡಿವೆ. ಇದೇ ಮೊದಲ ಬಾರಿಗೆ ಶ್ವಾನಗಳು  ರೆಕಾರ್ಡಿಂಗ್ ಸ್ಟುಡಿಯೋಗೆ ಬಂದು ತಮ್ಮ ಪಾತ್ರಕ್ಕೆ ಧ್ವನಿ ನೀಡಿವೆ ಎಂದು ನಿರ್ದೇಶಕ ರಘು ಹಾಸನ್ ಹೇಳಿದ್ದಾರೆ. ಶ್ರೀನಿವಾಸ್ ತಿಮ್ಮಯ್ಯ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

ಸಿಂಬಾ ಹಾಗೂ ಗುಂಡ ರಿಹಸರ್ಲ್  ಮಾಡಿ ಎರಡು ದಿನಗಳ ಕಾಲ ತಮ್ಮ ಪಾತ್ರಕ್ಕೆ ಧ್ವನಿ ನೀಡಿವೆ. ಸಿಂಬಾ ಈ ಹಿಂದೆ ಮಲಯಾಳಂ ಸಿನಿಮಾ  ಬೆಂಗಳೂರು ಡೇಸ್ ನಲ್ಲಿ ಅಭಿನಯಿಸಿತ್ತು. ಹಾಲಿವುಡ್ ನಲ್ಲಿ ಹುಲಿ, ಶ್ವಾನ ಮತ್ತಿತರ ಪ್ರಾಣಿಗಳು ಧ್ವನಿ ನೀಡಲಿವೆ ಎಂಬುದನ್ನು ಕೇಳಿದ್ದೇನೆ ಆದರೆ, ಭಾರತೀಯ ಸಿನಿಮಾದಲ್ಲಿ ಏಲ್ಲಿಯೂ ಕೇಳಿಲ್ಲ. ಇದೇ ಮೊದಲ ಬಾರಿಗೆ ಕೇಳುತ್ತಿರುವುದಾಗಿ ರಘು ಹಾಸನ್ ತಿಳಿಸಿದ್ದಾರೆ.

ಶಿವಸ್ವಾಮಿ ಅವರಿಂದ ವಿಶೇಷ ತರಬೇತಿ ನೀಡಿದ ಬಳಿಕ ಈ ಶ್ವಾನಗಳನ್ನು ರೆಕಾರ್ಡಿಂಗ್ ಸ್ಟುಡಿಯೋಗೆ ಕಳುಹಿಸಲಾಗಿದೆ. ರಘು ಹಾಸನ್ ಪ್ರಕಾರ ಇದೊಂದು ಅದ್ಬುತ ಅನುಭವವಾಗಿದೆ.  ಗುಂಡ ಮತ್ತು ಸಿಂಬಾ ಎರಡು ಶ್ವಾನಗಳು ಉತ್ತಮ ರೀತಿಯಲ್ಲಿ ನಮಗೆ ಬೆಂಬಲಿಸಿವೆ. ಇದೊಂದು ವಿಶಿಷ್ಠ ಸಿನಿಮಾವಾಗಿದ್ದು, ಪ್ರೇಕ್ಷಕರು ನಾನು ಮತ್ತು ಗುಂಡ ಸಿನಿಮಾದಲ್ಲಿ ಶ್ವಾನಗಳ ಅಭಿನಯವನ್ನು ಎಂಜಾಯ್ ಮಾಡಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ರಾಕ್ ಲೈನ್ ಸುಧಾಕರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದ ಗೌಡ, ಬಾಡಿ ಬಿಲ್ಡರ್ ಎವಿ ರವಿ ಮತ್ತಿತರು  ಈ ಸಿನಿಮಾದಲ್ಲಿ ನಟಿಸಿದ್ದು, ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. ಚಿದಾನಂದ ಹೆಚ್ ಕೆ ಅವರ ಛಾಯಾಗ್ರಾಹಣವಿರಲಿದೆ. ಪೊಯಮ್ ಪಿಕ್ಚರ್ ಪ್ರೊಢಕ್ಷನ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರ ಜನವರಿ 24ಕ್ಕೆ ತೆರೆ ಮೇಲೆ ಬರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com