ಸಿನಿಮೋತ್ಸವ: ‘ಬೆಲ್ ಬಾಟಮ್’ ಕುರುಕ್ಷೇತ್ರ ಅತ್ಯುತ್ತಮ ಜನಪ್ರಿಯ ಚಿತ್ರಗಳು!

ಹನ್ನೆರಡನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿ ಅಭಿನಯದ ‘ಬೆಲ್ ಬಾಟಮ್’ ಎರಡನೇ ಅತ್ಯುತ್ತಮ ಜನಪ್ರಿಯ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೆಲ್ ಬಾಟಮ್
ಬೆಲ್ ಬಾಟಮ್
Updated on

ಬೆಂಗಳೂರು: ಹನ್ನೆರಡನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿ ಅಭಿನಯದ ‘ಬೆಲ್ ಬಾಟಮ್’ ಎರಡನೇ ಅತ್ಯುತ್ತಮ ಜನಪ್ರಿಯ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಿಕ್ ನೀಡುವ ಪಂಚಿಂಗ್ ಡೈಲಾಗ್‌ಗಳ ಮೂಲಕ ರಾಬರಿ ಪತ್ತೇದಾರಿಕೆಯ ಪ್ರಸಂಗ ಹೊಂದಿರುವ ಚಿತ್ರವನ್ನು ಕನ್ನಡ ಚಿತ್ರ ರಸಿಕರ ಮೆಚ್ಚುಗೆ ಪಡೆಯುವಲ್ಲಿಯೂ ಯಶಸ್ವಿಯಾಗಿತ್ತು.

12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ದರ್ಶನ್‌ ಅಭಿನಯದ ‘ಮುನಿರತ್ನ ಕುರುಕ್ಷೇತ್ರ’ ಕನ್ನಡದ ಜನಪ್ರಿಯ ಅತ್ಯುತ್ತಮ ವರ್ಷದ ಚಿತ್ರ ಪ್ರಶಸ್ತಿಗೆ ಪಾತ್ರವಾಯಿತು. 

ಹಾಗೆಯೇ ಜಯತೀರ್ಥ ನಿರ್ದೇಶನದ ‘ಬೆಲ್‌ ಬಾಟಮ್‌’ ಹಾಗೂ ದರ್ಶನ್‌ ಅಭಿನಯದ ‘ಯಜಮಾನ’ ಚಿತ್ರಗಳಿಗೆ ಕ್ರಮವಾಗಿ 2 ಮತ್ತು 3ನೇ ಅತ್ಯುತ್ತಮ ಕನ್ನಡದ ಜನಪ್ರಿಯ ಚಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಫೆ.26ರಿಂದ ಮಾ.4ರವರೆಗೆ ಎಂಟು ದಿನಗಳ ಕಾಲ ಯಶಸ್ವಿಯಾಗಿ ನಡೆದ ಚಿತ್ರೋತ್ಸವಕ್ಕೆ ಬುಧವಾರ ವಿದ್ಯುಕ್ತವಾಗಿ ತೆರೆ ಬಿದ್ದಿತು. ಸಂಜೆ ವಿಧಾನಸೌಧದ ಬ್ಯಾಕ್ವೆಂಟ್‌ ಹಾಲ್‌ನಲ್ಲಿ ಸಮಾರೋಪ ಸಮಾರಂಭ ನಡೆಯಿತು. ಚಿತ್ರೋತ್ಸವದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಚಿತ್ರತಂಡಗಳಿಗೆ ರಾಜ್ಯಪಾಲ ವಜುಬಾಯ್‌ ವಾಲಾ ಮತ್ತು ಉಪ ಮುಖ್ಯಮಂತ್ರಿ ಡಾ ಸಿ.ಎನ್‌. ಅಶ್ವತ್ಥ ನಾರಾಯಣ ಪ್ರಶಸ್ತಿ ನೀಡಿ ಗೌರವಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com