ರಿಲೀಸ್ ಮುನ್ನವೇ ಕೋಟಿ, ಕೋಟಿ ಬಾಚಿದ ರಾಬರ್ಟ್: ವಿತರಣೆ ಜವಾಬ್ದಾರಿಯೂ ನಿರ್ಮಾಪಕರದ್ದೇ!

ರಾಬರ್ಟ್‌' ಬಿಡುಗಡೆ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಹಣ ಗಳಿಸಲಿದೆಯೋ ಗೊತ್ತಿಲ್ಲ. ಆದರೆ ಬಿಡುಗಡೆಗೂ ಮುನ್ನವೇ ಬಹುಕೋಟಿ ರೂ. ಸಂಪಾದನೆ ಮಾಡುತ್ತಿದೆ ಎಂಬ ಸುದ್ದಿ ಗಾಂಧಿನಗರದಿಂದ ಕೇಳಿಬರುತ್ತಿದೆ. 
ರಾಬರ್ಟ್  ಸ್ಟಿಲ್
ರಾಬರ್ಟ್ ಸ್ಟಿಲ್
Updated on

'ರಾಬರ್ಟ್‌' ಬಿಡುಗಡೆ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಹಣ ಗಳಿಸಲಿದೆಯೋ ಗೊತ್ತಿಲ್ಲ. ಆದರೆ ಬಿಡುಗಡೆಗೂ ಮುನ್ನವೇ ಬಹುಕೋಟಿ ರೂ. ಸಂಪಾದನೆ ಮಾಡುತ್ತಿದೆ ಎಂಬ ಸುದ್ದಿ ಗಾಂಧಿನಗರದಿಂದ ಕೇಳಿಬರುತ್ತಿದೆ. 

ರಾಬರ್ಟ್ ಸಿನಿಮಾಗೆ ಬಂಡವಾಳ ಹೂಡಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಈ ಸಿನಿಮಾವನ್ನು ತಾವೇ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. 

ಈ ಮೊದಲು ಉಮಾಪತಿ ಸಹಭಾಗಿತ್ವದಲ್ಲಿ ಹೆಬ್ಬುಲಿ ಸಿನಿಮಾ ವಿತರಕಾಗಿದ್ದರು. ಸದ್ಯ ತಾವು ನಿರ್ಮಾಪಕರಾಗಿರುವುದರಿಂದ ರಾಬರ್ಟ್ ಹಂಚಿಕೆ ಹೊಣೆ ತಾವೇ ಹೊತ್ತಿದ್ದಾರೆ. 

ವಿತರಕರು ಪ್ರಾಮಾಣಿಕವಾಗಿಲ್ಲ, ಸಿನಿಮಾಪ್ರದರ್ಶನಗಳ ಬಗ್ಗೆ ಸರಿಯಾದ ಮಾಹಿತಿ ನೀಡುವುದಿಲ್ಲ,  ಹೀಗಾಗಿ ನಮಗೆ ಸರಿಯಾದ ಸಮಯ್ಕೆ ಹಣ ಸಿಗುವುದಿಲ್ಲ, ವಿಳಂಬ ಮಾಡುತ್ತಾರೆ ಎಂದು ಉಮಾಪತಿ ಹೇಳಿದ್ದಾರೆ.

ಈ ಎಲ್ಲಾ  ಕಾರಣಗಳಿಂದ ರಾಬರ್ಟ್ ಸಿನಿಮಾವನ್ನು ನಾನೇ ವಿತರಿಸಲು ನಿರ್ಧರಿಸಿದ್ದೇನೆ, ಮೊದಲ ವಾರದಲ್ಲೇ ರಾಬರ್ಟ್ 30 ರಿಂದ 40 ಕೋಟಿ ರೂ ಬಾಚುವ ಸಾಧ್ಯತೆಯಿದೆ.  ಹೀಗಾಗಿ ವಿತರಕನ ಜವಾಬ್ದಾರಿಯನ್ನು ನಿರ್ಮಾಪಕರೇ ವಹಿಸಿಕೊಂಡಿದ್ದಾರೆ.


ಈ ಚಿತ್ರದ ವಿತರಣೆ ಹಕ್ಕುಗಳು ಅಂದಾಜು 35 ಕೋಟಿ ರೂ.ಗಳಿಗೆ ಮಾರಾಟ ಆಗಿದೆ ಎನ್ನಲಾಗಿದೆ. ಏಪ್ರಿಲ್‌ 9ರಂದು ರಾಜ್ಯಾದ್ಯಂತ 'ರಾಬರ್ಟ್‌' ತೆರೆಕಾಣುತ್ತಿದೆ. ಕನ್ನಡ ಮಾತ್ರವಲ್ಲದೆ, ತೆಲುಗಿನಲ್ಲಿಯೂ ಚಿತ್ರ ಬಿಡುಗಡೆ ಆಗಲಿದೆ. 

ಇದರ ಜೊತೆಗೆ ಈ ಸಿನಿಮಾದ ಆಡಿಯೋ ಮೂಲಕವೂ ಭರ್ಜರಿ ಕಮಾಯಿ ಆಗುತ್ತಿದೆಯಂತೆ. ಇತ್ತೀಚೆಗಷ್ಟೇ ಮೊದಲ ಹಾಡು ಹೊರಬಂದಿದೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿಬಂದಿವೆ. 

ಟಿವಿ ಮತ್ತು ಡಿಜಿಟಲ್‌ ಪ್ರಸಾರ ಹಕ್ಕು ಸೇರಿದಂತೆ ಸಿನಿಮಾಗೆ ಸಂಬಂಧಿಸಿದ ಇನ್ನಿತರ ಹಕ್ಕುಗಳ ಮಾರಾಟದ ಮಾತುಕತೆ ಚಾಲ್ತಿಯಲ್ಲಿದ್ದು ಎಲ್ಲ ಸೇರಿದರೆ 60 ಕೋಟಿ ರೂಗಿಂತಲೂ ಅಧಿಕ ಗಳಿಕೆ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com