ಪನ್ನಾಗಭರಣ ನಿರ್ದೇಶನದ ಹಾಸ್ಯ ಪ್ರಧಾನ ಚಿತ್ರದಲ್ಲಿ ಪಾರುಲ್ ಯಾದವ್?

ಫ್ರೆಂಚ್ ಬಿರಿಯಾನಿ ಚಿತ್ರದ ನಿರ್ದೇಶಕ ಪನ್ನಾಗಭರಣ ಮುಂದಿನ ಪ್ರಾಜೆಕ್ಟ್ ಗೆ ಸಿದ್ದರಾಗುತ್ತಿದ್ದಾರೆ. ಬಟರ್ ಫ್ಲೈ ನಟಿ ಹಾಗೂ ನಿರ್ಮಾಪಕಿ ಪಾರುಲ್ ಯಾದವ್ ಜೊತೆಗೆ ಸಿನೆಮಾ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಪಾರುಲ್ ಯಾದವ್
ಪಾರುಲ್ ಯಾದವ್
Updated on

ಫ್ರೆಂಚ್ ಬಿರಿಯಾನಿ ಚಿತ್ರದ ನಿರ್ದೇಶಕ ಪನ್ನಾಗಭರಣ ಮುಂದಿನ ಪ್ರಾಜೆಕ್ಟ್ ಗೆ ಸಿದ್ದರಾಗುತ್ತಿದ್ದಾರೆ. ಬಟರ್ ಫ್ಲೈ ನಟಿ ಹಾಗೂ ನಿರ್ಮಾಪಕಿ ಪಾರುಲ್ ಯಾದವ್ ಜೊತೆಗೆ ಸಿನೆಮಾ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಇತ್ತೀಚೆಗೆ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಪಾರುಲ್ ಯಾದವ್ ಅವರ ನಿವಾಸದಲ್ಲಿ ಕಾಣಿಸಿಕೊಂಡಿದ್ದರು. ಹಾಸ್ಯಾಧಾರಿತ ಚಿತ್ರದಲ್ಲಿ ಒಂದಾಗುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ನಾವು ಈಗಷ್ಟೇ ಮಾತುಕತೆ ಹಂತದಲ್ಲಿದ್ದು ಈಗಲೇ ಯಾವುದನ್ನೂ ಖಚಿತಪಡಿಸಲು ಸಾಧ್ಯವಿಲ್ಲ. ಸ್ಕ್ರಿಪ್ಟ್ ಅಂತಿಮವಾದ ಮೇಲಷ್ಟೇ ನಾವು ಯಾವುದರ ಬಗ್ಗೆಯೂ ವಿವರ ನೀಡಲು ಸಾಧ್ಯ ಎಂದು ಪಾರುಲ್ ಯಾದವ್ ಹೇಳಿದ್ದು ಇದರ ಜೊತೆಗೆ ಅವರು ಮತ್ತೊಂದು ಡಿ ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಿನೆಮಾ ಮಾಡುತ್ತಿದ್ದಾರೆ. ಅದರ ಬಗ್ಗೆ ಈ ತಿಂಗಳ ಕೊನೆಗೆ ಮಾತುಕತೆಯೆಲ್ಲವೂ ಅಂತಿಮವಾಗಲಿದೆ ಎಂದರು.

ಹಿಂದಿಯ ಕ್ವೀನ್ ಚಿತ್ರದ ರಿಮೇಕ್ ನ್ನು ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಮನು ಕುಮಾರನ್ ಅವರ ಜೊತೆ ಸೇರಿ ಬಟರ್ ಫ್ಲೈ ಚಿತ್ರ ನಿರ್ಮಿಸಿರುವ ಪಾರುಲ್ ಯಾದವ್ ಅದನ್ನು ತೆರೆಗೆ ತರಲು ಇದಿರು ನೋಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com