ರಾಜ್ ಕುಮಾರ್ ಪುಣ್ಯಸ್ಮರಣೆ: ಸಮಾಧಿಗೆ ಗೌರವ ಸಲ್ಲಿಸಿದ ಶಿವಣ್ಣ

ಇಂದು ವರನಟ ದಿ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ದಿನವಾಗಿದ್ದು, ಶಿವರಾಜ್ ಕುಮಾರ್ ಅವರು ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಿದರು.

Published: 12th April 2020 10:45 AM  |   Last Updated: 12th April 2020 10:45 AM   |  A+A-


Rajkumar memorial

ಡಾ.ರಾಜ್ ಕುಮಾರ್ ಸಮಾಧಿ

Posted By : Srinivasamurthy VN
Source : UNI

ಬೆಂಗಳೂರು: ಇಂದು ವರನಟ ದಿ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ದಿನವಾಗಿದ್ದು, ಶಿವರಾಜ್ ಕುಮಾರ್ ಅವರು ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ವರನಟ ದಿ.ಡಾ.ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ 14 ವರ್ಷಗಳೇ ಸಂದಿವೆ. ಕೊರೊನಾ ಸೋಂಕು ಇದೀಗ ರಾಜ್ ಕುಮಾರ್ ಪುಣ್ಯಸ್ಮರಣೆಗೂ ತಟ್ಟಿದ್ದು, ಪ್ರತಿವರ್ಷ ಸಾವಿರಾರು ಅಭಿಮಾನಿಗಳು ರಾಜ್ ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಸೇರಿ ರಾಜ್ ಸಮಾಧಿಗೆ ತೆರಳಿ  ಪೂಜೆ‌ನಮನ ಸಲ್ಲಿಸುತ್ತಿದ್ದರು. ಆದರೆ ಈ ವರ್ಷ ವರನಟನ ಪುಣ್ಯಸ್ಮರಣೆಗೂ ಕರಾಳ ಛಾಯೆಯಂತೆ ಆಚರಿಸಿದೆ. 14ನೇ‌ ಪುಣ್ಯಸ್ಮರಣೆಯಾದ ಇಂದು ಬೆಳಿಗ್ಗೆ ರಾಜ್ ಕುಮಾರ್ ಹಿರಿಯ ಪುತ್ರ ಚಂದನ ವನದ ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್ ಒಬ್ಬರೇ ತಂದೆಯ ಸ್ಮಾರಕಕ್ಕೆ ತೆರಳಿ  ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶಿವರಾಜ್‍ಕುಮಾರ್, ನಾವು ಅಪ್ಪಾಜಿ ಇಲ್ಲ ಎಂದು ಅಂದುಕೊಂಡಿಲ್ಲ. ಅವರ ಕಣ್ಣುಗಳು ಜಗತ್ತನ್ನು ನೋಡುತ್ತಿವೆ. ಲಾಕ್‍ಡೌನ್ ಆಗಿದ್ದರಿಂದ ಎಲ್ಲರೂ ಬರದೇ ಕೆಲವರು ಅಪ್ಪಾಜಿ ಸಮಾಧಿಗೆ ಬಂದು ನಮಸ್ಕರಿಸಿದ್ದೇವೆ ಎಂದು ಹೇಳಿದರು. ಇದೇ ವೇಳೆ ಕೊರೋನಾ  ವೈರಸ್ ಮಹಾಮಾರಿ ತಡೆಗೆ ಸಾಮಾಜಿಕ ಅಂತರವೇ ಮದ್ದು. ಯಾರು ಹೆಚ್ಚಾಗಿ ಸೇರಬೇಡಿ. ಜನರು ಸಹಕಾರ ಕೊಟ್ಟರೆ ಅದಷ್ಟು ಬೇಗ ಕೊರೋನಾ ಮಹಾಮಾರಿಯಿಂದ ಮುಕ್ತಿ ಪಡೆಯಬಹುದು. ಸಿನಿಮಾ ಇಂಡಸ್ಟ್ರಿಯಿಂದ ಯಾರು ಕೂಡ ಇಲ್ಲಿಯ ತನಕ ಕಷ್ಟ ಅಂತ ಸಂಪರ್ಕ ಮಾಡಿಲ್ಲ.  ಲಾಕ್‍ಡೌನ್ ತಿಳಿಗೊಂಡ ನಂತರ ಸಿನಿಮಾ ಯೂನಿಟ್ ಅವರನ್ನ ಸಂಪರ್ಕ ಮಾಡಿ ಸಹಾಯ ಮಾಡುತ್ತೇವೆ ಎಂದು ಹೇಳಿದರು.

Stay up to date on all the latest ಸಿನಿಮಾ ಸುದ್ದಿ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp