'ಸಿನಿಮಾ ನೋಡಿ ಡಾಟ್ ಇನ್ ಡೌನ್ ಲೋಡ್ ಮಾಡಿ, ನಿಮ್ಮಿಚ್ಛೆಯ ಚಿತ್ರ ವೀಕ್ಷಿಸಿ

ಕೊರೋನಾ ಬಂದಾಗಿನಿಂದಲೂ ಜನರು ಚಿತ್ರಮಂದಿರಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಲಾಕ್ ಡೌನ್ ತೆರವಾದ ಬಳಿಕ ಚಿತ್ರಮಂದಿರಗಳು ತೆರೆದಿವೆಯಾದರೂ, ಪ್ರೇಕ್ಷಕರ ಸಂಖ್ಯೆ ಹೇಳಿಕೊಳ್ಳುವಂತೇನೂ ಇಲ್ಲ.
ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್

ಬೆಂಗಳೂರು: ಕೊರೋನಾ ಬಂದಾಗಿನಿಂದಲೂ ಜನರು ಚಿತ್ರಮಂದಿರಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಲಾಕ್ ಡೌನ್ ತೆರವಾದ ಬಳಿಕ ಚಿತ್ರಮಂದಿರಗಳು ತೆರೆದಿವೆಯಾದರೂ, ಪ್ರೇಕ್ಷಕರ ಸಂಖ್ಯೆ ಹೇಳಿಕೊಳ್ಳುವಂತೇನೂ ಇಲ್ಲ.

ಈಗಾಗಲೇ ಪ್ರದರ್ಶನಕ್ಕೆ ಸಿದ್ಧವಾದ ಹಾಗೂ ಶೂಟಿಂಗ್ ಹಂತದಲ್ಲಿರುವ ಹಲವು ಸಿನಿಮಾಗಳು ಸ್ಥಗಿತವಾಗಿದ್ದರಿಂದ ನಿರ್ಮಾಪಕರು, ನಿರ್ದೇಶಕರು, ತಾಂತ್ರಿಕ ವರ್ಗ, ಕಲಾವಿದರು ಮುಂದೇನು ಎಂಬ ಗೊಂದಲದಲ್ಲಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕನ್ನಡಿಗರೇ ಸೇರಿಕೊಂಡು ' ಸಿನಿಮಾ ನೋಡಿ ಡಾಟ್ ಇನ್' ಹೆಸರಿನೊಂದಿಗೆ ತಂಡವನ್ನು ಕಟ್ಟಿಕೊಂಡಿದ್ದಾರೆ.

ಇದರಲ್ಲಿ ಹೂಡಿಕೆದಾರರು, ಡೆವಲಪರ್ ಮತ್ತು ಸಿನಿ ಪ್ರಿಯರು ಸೇರಿಕೊಂಡಿರುವುದು ಮತ್ತು ಒಟಿಟಿಗಿಂತ ಭಿನ್ನವಾಗಿರುವುದು ವಿಶೇಷ. ಅಡ್ವಾನ್ಸ್ ಕ್ಲೌಡ್ ಟೆಕ್ನಾಲಜಿಯೊಂದಿಗೆ ಸದರಿ ಯೋಜನೆ ಇರಲಿದೆ. ವೀಕ್ಷಕರು ಚಂದಾದಾರರಾಗಬೇಕಿಲ್ಲ. ಜಾಹಿರಾತು ಮುಕ್ತವಾಗಿದೆ. ವೀಕ್ಷಕರ ಇಚ್ಚೆಯ ಸಿನಿಮಾ ನೋಡುವ ವೇದಿಕೆಯಾಗಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com