ಚೆನ್ನೈ: ತಮಿಳು ಕಿರುತೆರೆ ನಟಿ ವಿ.ಜೆ. ಚಿತ್ರಾ ಮೃತದೇಹ ಹೊಟೇಲ್ ರೂಂನಲ್ಲಿ ಪತ್ತೆ, ಆತ್ಮಹತ್ಯೆ ಶಂಕೆ

ಮತ್ತೊಬ್ಬ ನಟಿ ನಿಗೂಢವಾಗಿ ಮೃತಪಟ್ಟಿರುವ ಸುದ್ದಿ ಬುಧವಾರ ಬೆಳಗ್ಗೆ ಹೊರಬಿದ್ದಿದೆ. ತಮಿಳುನಾಡಿನ ಜನಪ್ರಿಯ ಕಿರುತೆರೆ ನಟಿ ಹಾಗೂ ನಿರೂಪಕಿ ವಿ.ಜೆ. ಚಿತ್ರಾ ಅವರ ಮೃತದೇಹ ಚೆನ್ನೈ ಹೊರವಲಯದ ನಜರತ್ ಪೆಟ್ ನಲ್ಲಿರುವ ಹೊಟೇಲ್ ರೂಂನಲ್ಲಿ ಪತ್ತೆಯಾಗಿದೆ.
ವಿ ಜೆ ಚಿತ್ರಾ
ವಿ ಜೆ ಚಿತ್ರಾ
Updated on: 

ಚೆನ್ನೈ: ಮತ್ತೊಬ್ಬ ನಟಿ ನಿಗೂಢವಾಗಿ ಮೃತಪಟ್ಟಿರುವ ಸುದ್ದಿ ಬುಧವಾರ ಬೆಳಗ್ಗೆ ಹೊರಬಿದ್ದಿದೆ. ತಮಿಳುನಾಡಿನ ಜನಪ್ರಿಯ ಕಿರುತೆರೆ ನಟಿ ಹಾಗೂ ನಿರೂಪಕಿ ವಿ ಜೆ ಚಿತ್ರಾ ಅವರ ಮೃತದೇಹ ಚೆನ್ನೈ ಹೊರವಲಯದ ನಜರತ್ ಪೆಟ್ ನಲ್ಲಿರುವ ಹೊಟೇಲ್ ರೂಂನಲ್ಲಿ ಪತ್ತೆಯಾಗಿದೆ.

28 ವರ್ಷದ ನಟಿ ಚಿತ್ರಾ ಧಾರಾವಾಹಿಯ ಶೂಟಿಂಗ್ ವೇಳೆ ಹೊಟೇಲ್ ನಲ್ಲಿ ತಂಗಿದ್ದರು, ಇಂದು ಬೆಳಗ್ಗೆ ಅವರ ಮೃತದೇಹ ಸಿಕ್ಕಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಚೆನ್ನೈ ಪೊಲೀಸರು ಶಂಕಿಸಿದ್ದಾರೆ.

ತಮಿಳಿನ ವಿಜಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಪಾಂಡಿಯಾನ್ ಸ್ಟೋರ್ಸ್' ಧಾರಾವಾಹಿಯಲ್ಲಿ ಮುಲ್ಲೈ ಪಾತ್ರದ ಮೂಲಕ ಚಿತ್ರಾ ಜನಪ್ರಿಯರಾಗಿದ್ದರು.

ಇತ್ತೀಚೆಗೆ ಉದ್ಯಮಿ ಜೊತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಿತ್ರಾ ನಿನ್ನೆ ತಡರಾತ್ರಿ ಧಾರಾವಾಹಿ ಶೂಟಿಂಗ್ ಮುಗಿಸಿ ಹೊಟೇಲ್ ಗೆ ಮರಳಿದ್ದರು. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ನಿಧನಕ್ಕೆ ಕಾರಣ ಹುಡುಕುತ್ತಿದ್ದು, ತನಿಖೆ ಮುಂದುವರಿದಿದೆ. 

ನಟಿಯ ನಿಧನ ವಾರ್ತೆ ತಿಳಿಯುತ್ತಿದ್ದಂತೆ ಅನೇಕರು ಆಘಾತ ವ್ಯಕ್ತಪಡಿಸಿದ್ದು ಸೋಷಿಯಲ್ ಮೀಡಿಯಾ ಮೂಲಕ ಕಂಬನಿ ಮಿಡಿದಿದ್ದಾರೆ. ವಿಜಯ ಟಿವಿ ಸೋಷಿಯಲ್ ಅಕೌಂಟ್ ನಲ್ಲಿ ಕೂಡ ದಿಗ್ಭ್ರಮೆ ವ್ಯಕ್ತವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com