'ಡಿಟಿಎಸ್' ಅಬ್ಬರ: ಕನ್ನಡಕ್ಕೆ ಪಾದಾರ್ಪಣೆ ಮಾಡಲಿರುವ ತೆಲುಗು ನಟ ಸುನಿಲ್ ವರ್ಮಾ

ತೆಲುಗಿನ ಖ್ಯಾತ ನಟ ಸುನಿಲ್ ವರ್ಮಾ ಇದೀಗ ಕನ್ನಡದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದು, ತಮ್ಮ ಮುಂದಿನ ಬಹು ನಿರೀಕ್ಷಿತ ಚಿತ್ರ ಡಿಟಿಎಸ್ ಅನ್ನು ತೆಲುಗು ಮಾತ್ರವಲ್ಲದೇ ಕನ್ನಡದಲ್ಲೂ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ.
ಡಿಟಿಎಸ್ ನಲ್ಲಿ ನಟ ಸುನೀಲ್
ಡಿಟಿಎಸ್ ನಲ್ಲಿ ನಟ ಸುನೀಲ್
Updated on: 

ಹೈದರಾಬಾದ್: ತೆಲುಗಿನ ಖ್ಯಾತ ನಟ ಸುನಿಲ್ ವರ್ಮಾ ಇದೀಗ ಕನ್ನಡದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದು, ತಮ್ಮ ಮುಂದಿನ ಬಹು ನಿರೀಕ್ಷಿತ ಚಿತ್ರ ಡಿಟಿಎಸ್ ಅನ್ನು ತೆಲುಗು ಮಾತ್ರವಲ್ಲದೇ ಕನ್ನಡದಲ್ಲೂ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ.

ಹೌದು.. ಸುನಿಲ್ ನಟನೆಯ ಮುಂದಿನ ಚಿತ್ರಕ್ಕೆ ಡಿಟಿಎಸ್-ಡೇರ್ ಟು ಸ್ಲೀಪ್ ಎಂಬ ಹೆಸರಿಡಲಾಗಿದ್ದು, ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ತೆರೆಗೆ ಬರಲಿದೆ. ಚಿತ್ರವನ್ನು ಅಭಿರಾಮ್ ಪಿಲ್ಲಾ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ಸಾಯಿ ಕಾರ್ತಿಕ್ ಬಂಡವಾಳ ಹೂಡುವುದು ಮಾತ್ರವಲ್ಲದೇ ಸಂಗೀತ ಕೂಡ  ನೀಡಿದ್ದಾರೆ. 

ಯುಗಾದಿ ಹಬ್ಬದ ನಿಮಿತ್ತ ಚಿತ್ರತಂಡ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದು, ಈ ಪೋಸ್ಟರ್ ಮೂಲಕವೇ ಚಿತ್ರದ ಶೀರ್ಷಿಕೆ ಘೋಷಣೆ ಮಾಡಿದೆ.

ಈ ಹಿಂದೆ ಒಟಿಟಿಯಲ್ಲಿ ಬಿಡುಗಡೆಯಾಗಿದ್ದ ಕಲರ್ ಫೋಟೋ ಚಿತ್ರದಲ್ಲಿ ಇನ್ಸ್ ಪೆಕ್ಟರ್ ರಾಮರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುನಿಲ್ ಇದೀಗ ಮತ್ತೆ ಪೂರ್ಣ ಪ್ರಮಾಣದ ನಾಯಕನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಇನ್ನು ಸುನಿಲ್ ಅಭಿನಯದ ಮತ್ತೊಂದು ಚಿತ್ರ ಪುಷ್ಪಾ ಮತ್ತು ಎಫ್ 3 ಚಿತ್ರಗಳನ್ನು ಇನ್ನಷ್ಟೇ ತೆರೆ  ಕಾಣಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com