ಧನ್ವೀರ್ ನಟನೆಯ 'ಬಂಪರ್' ಸಿನಿಮಾಗೆ ಹೊಸ ನಿರ್ದೇಶಕ!

ನಟ ಧನ್ವೀರ್ ಅಭಿನಯದ ಬಂಪರ್ ಸಿನಿಮಾ ಶೂಟಿಂಗ್ 2021 ರ ಮಧ್ಯ ಭಾಗದಲ್ಲಿ ಆರಂಭವಾಗಲಿದೆ.
ಧನ್ವೀರ್
ಧನ್ವೀರ್
Updated on

ನಟ ಧನ್ವೀರ್ ಅಭಿನಯದ ಬಂಪರ್ ಸಿನಿಮಾ ಶೂಟಿಂಗ್ 2021 ರ ಮಧ್ಯ ಭಾಗದಲ್ಲಿ ಆರಂಭವಾಗಲಿದೆ.

ಕಥೆ ಸಿದ್ದವಾಗಿದ್ದು ಜೂನ್ ನಲ್ಲಿ ಸಿನಿಮಾ ಶೂಟಿಂಗ್ ಆರಂಭಿಸಬೇಕೆಂದು ನಿರ್ಧರಿಸಿದ್ದೇವು, ಆದರೆ ಬೈ ಟು ಲವ್ ಸಿನಿಮಾ ಆರಂಭವಾದ ಕಾರಣ ಬಂಪರ್ ಮುಂದೆ ಹೋಯಿತು ಎಂದು ಹೇಳಿದ್ದಾರೆ.

ಬೈ ಟು ಲವ್ ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ ಮತ್ತು ಸುಪ್ರೀತ್ ಪ್ರೊಡಕ್ಷನ್ ಎರಡನೇ ಬಾರಿಗೆ ಒಂದಾಗಿ ಬಂಪರ್ ಸಿನಿಮಾ ನಿರ್ಮಾಣ ಮಾಡಲಿದೆ. ಆದರೆ ಬಂಪರ್ ,ಸಿನಿಮಾವನ್ನು ಹರಿ ಸಂತೋಷ್ ನಿರ್ದೇಶಿಸುತ್ತಿಲ್ಲ.  ಬಂಪರ್ ಸ್ಟೋರಿ ಬದಲಾವಣೆಯಾಗಿದ್ದು ಕಥೆ ನಿರ್ದೇಶನಕ್ಕೆ ಹೊಸ ನಿರ್ದೇಶಕರು ಬರಲಿದ್ದಾರೆ ಎಂದು ಧನ್ವೀರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com